ದಾವಣಗೆರೆ, ಫೆ. 12- ನಗರದ ಶ್ರೀ ಬಂಕಾಪುರದ ನಂಜುಂಡಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಆಚರಿಸಲಾಯಿತು.
ಶೇರ್ ಅಲಿ, ಮಲ್ಲಿಕಾರ್ಜುನ ಸ್ವಾಮಿ, ಶೌಕತ್ ಅಲಿ, ಜಿ.ವಿ. ಮಂಜಪ್ಪ, ಎಸ್.ವಿ. ಸುಧಾರಾಣಿ, ಗಂಗಪ್ಪ ಉಗರಕೋಡ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಶೈಲ ಜಗದ್ಗುರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎನ್.ಎ. ಮುರುಗೇಶ್ ವಹಿಸಿದ್ದರು. ಕಾರ್ಯದರ್ಶಿ ಎಂ. ಬನ್ನಯ್ಯ ಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಲಿಂ. ಬಿ. ಅಶ್ವಿನಿ ಜ್ಞಾಪಕಾರ್ಥ ಚಿ. ಮಂಥನ್ ಹಿರೇಮಠ ಅವರು ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಜಾಮಿಟ್ರಿ, ಪೆನ್ನು, ಮತ್ತು ಪೆನ್ಸಿಲ್‌ಗಳನ್ನು ವಿತರಿಸಿದರು. ಬಿ.ಎ. ಬಿರಾದರ ವಂದಿಸಿದರು.