ತಾತ್ಕಾಲಿಕ ಸರ್ಕಾರಿ ಬಸ್ ನಿಲ್ದಾಣ ತೆರವು

ತಾತ್ಕಾಲಿಕ ಸರ್ಕಾರಿ ಬಸ್ ನಿಲ್ದಾಣ ತೆರವು

ದಾವಣಗೆರೆ, ಫೆ.12-   ಕ್ರೀಡಾಪಟುಗಳಿಗೆ ತೊಂದರೆಯಾಗಿ ಪರಿಣಮಿಸಿದ್ದ ನಗರದ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ  ಸರ್ಕಾರಿ ಬಸ್ ನಿಲ್ದಾಣವನ್ನು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರೂ,  ದೂಡಾ ಅಧ್ಯಕ್ಷರೂ ಆದ ದಿನೇಶ್ ಕೆ. ಶೆಟ್ಟಿ ಅವರು ಜೆಸಿಬಿ ಚಲಾಯಿಸುವ ಮುಖಾಂತರ ತೆರವು ಕಾರ್ಯಕ್ಕೆ ಇಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ರೀಡಾಪಟುಗಳಾದ ತಿಮ್ಮೇಶ್, ಪರಶುರಾಮ್ ಗೋಪಾಲ್, ಚೇತನ್ ಅಜ್ಜಂಪೂರ್, ಬಕ್ಕೇಶ್, ದಿವಾ ಕರ್, ಶಿವರಾಜ್,  ಸತೀಶ್ ಶೆಟ್ಟಿ, ಯುವರಾಜ್ ಇನ್ನೂ ಮುಂತಾದವರು ಇದ್ದರು

error: Content is protected !!