22 ಕೆರೆ ತುಂಬಿಸುವ ಯೋಜನೆಗೆ ತರಳಬಾಳು ಜಗದ್ಗುರುಗಳಿಂದಲೇ ಮರು ಚಾಲನೆ ಆಗಲಿದೆ

22 ಕೆರೆ ತುಂಬಿಸುವ ಯೋಜನೆಗೆ ತರಳಬಾಳು ಜಗದ್ಗುರುಗಳಿಂದಲೇ ಮರು ಚಾಲನೆ ಆಗಲಿದೆ

ಭರಮಸಾಗರ, ಫೆ.10- ತರಳಬಾಳು ಜಗದ್ಗುರುಗಳ ಕನಸಿನ ಕೂಸಾದ 22 ಕೆರೆ ತುಂಬಿಸುವ ಯೋಜನೆಯ ಲೋಪ ಸರಿಪಡಿಸಿ, ಶ್ರೀಗಳಿಂದಲೇ ಕೆರೆ ತುಂಬಿಸುವ ಯೋಜನೆಗೆ ಮರು ಚಾಲನೆ ಆಗುತ್ತಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್‌. ಬಸವಂತಪ್ಪ ತಿಳಿಸಿದರು.

ಇಲ್ಲಿ ನಡೆಯುತ್ತಿರುವ ತರಳಬಾಳು ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೆರೆ ತುಂಬಿಸುವ ಯೋಜನೆಯ ಲೋಪ ಸರಿಪಡಿಸುವ ನಿಟ್ಟಿನಲ್ಲಿ ಹೊಸದಾಗಿ ಪೈಪುಗಳನ್ನು ಅಳವಡಿಸಬೇಕು. ಈಗಾಗಲೇ 20 ಕೋಟಿ ರೂ. ಟೆಂಡರ್‌ ಕರೆದಿದ್ದಾರೆ. ಇನ್ನೂ 70 ಕೋಟಿ ರೂ. ಬಂದರೆ ಮೇನ್‌ ಪೈಪುಗಳನ್ನು ಸರಿಪಡಿಸಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಶ್ರೀಗಳಿಗೆ ಹೇಳಿದರು.

ಜಗದ್ಗುರುಗಳು ಎಲ್ಲೇ ಕಾಲಿಟ್ಟರು ನೀರು ಬರುತ್ತಿದೆ. ಮಾಯಕೊಂಡ, ಅರಸೀಕೆೇರೆ, ಚನ್ನಗಿರಿ ಮತ್ತು ಜಗಳೂರಿಗೂ ಶ್ರೀಗಳ ಕೃಪೆಯಿಂದ ನೀರು ತಲುಪುತ್ತಿದೆ ಎಂದು ಹೇಳಿದರು.

error: Content is protected !!