ಯಲ್ಲಮ್ಮ ನಗರದ 4ನೇ ಮೇನ್, 4ನೇ ಕ್ರಾಸ್‌ನಲ್ಲಿನ ಶ್ರೀನ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸೇವಾ ಸಮಿತಿಯಿಂದ 25ನೇ ವರ್ಷದ ಬೆಳ್ಳಿ ಮಹೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ 9.30ಕ್ಕೆ ಚಂಡಿಕಾ ಹೋಮ ಜರುಗಲಿದೆ.
ನಾಳೆ ಬುಧವಾರ ಭಾರತ ಹುಣ್ಣಿಮೆ ಕಾರ್ಯಕ್ರಮವಿರುತ್ತದೆ. ಪ್ರಾತಃಕಾಲ ಶ್ರೀ ಜಗನ್ನಾತೆ ರೇಣುಕಾ ಯಲ್ಲಮ್ಮದೇವಿಗೆ ಸುಮಂಗಲಿಯವರಿಂದ ಸಕಲ ವಾದ್ಯಗಳೊಂದಿಗೆ ಗಂಗಾ ಜಲವನ್ನು ತರುವುದು ಹಾಗೂ ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ನಡೆಯುತ್ತದೆ. ನಂತರ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.