ವಿಶ್ವ ಕನ್ನಡ ಸಮ್ಮೇಳನಕ್ಕೆ 50 ಲಕ್ಷ: ಪಾಲಿಕೆಗೆ ಕಸಾಪ ಅಧ್ಯಕ್ಷ ವಾಮದೇವಪ್ಪ ಅಭಿನಂದನೆ

ದಾವಣಗೆರೆ, ಫೆ. 10 – ನಗರದಲ್ಲಿ ನಡೆಸಲು ಉದ್ದೇಶಿಸಿರುವ  3ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ 50 ಲಕ್ಷ ರೂ.ಗಳನ್ನು ಮಹಾನಗರ ಪಾಲಿಕೆಯ ಆಯವ್ಯಯದಲ್ಲಿ  ಮೀಸಲಿರಿಸಿ, ಪಾಲಿಕೆ ಆಡಳಿತ ಕೈಗೊಂಡಿರುವ ಕ್ರಮವನನ್ನು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ  ಬಿ.ವಾಮದೇವಪ್ಪ ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

ಮೇಯರ್ ಮತ್ತು ಸರ್ವಸದಸ್ಯರು ಹಾಗೂ ಆಯುಕ್ತರಿಗೆ ಅಭಿನಂದನೆ ಸಲ್ಲಿಸಿರುವ  ವಾಮದೇವಪ್ಪ,  ಪ್ರತಿ ವರ್ಷ ಪಾಲಿಕೆಯಿಂದ ನಡೆಯುವ 3 ದಿನಗಳ ಕಾಲ ಕನ್ನಡ ರಾಜ್ಯೋತ್ಸವದ ಆಚರಣೆಗಾಗಿ 50 ಲಕ್ಷ ರೂ.ಗಳು,  ಪಾಲಿಕೆ ಆವರಣದ ಪುಟ್ಟಣ್ಣ ಕಣಗಾಲ್ ವಾದ್ಯ ಮಂಟಪದಲ್ಲಿ ಕಾರ್ಯಕ್ರಮ ನಡೆಸಲು 10 ಲಕ್ಷ ರೂ. ಮತ್ತು  ತಾಲ್ಲೂಕು ಸಮ್ಮೇಳನಕ್ಕೆ 25 ಸಾವಿರ ಹಾಗೂ ಜಿಲ್ಲಾ ಸಮ್ಮೇಳನಕ್ಕೆ 50 ಸಾವಿರ ರೂ.ಗಳನ್ನು 2025-26ನೇ ಸಾಲಿನ ಆಯವ್ಯಯದಲ್ಲಿ ಮೀಸಲಿರಿಸಿರುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

error: Content is protected !!