ಭಾನುವಳ್ಳಿಯಲ್ಲಿ ಇಂದು ಬೃಹತ್ ಉದ್ಯೋಗ ಮೇಳ

ದಾವಣಗೆರೆ, ಫೆ. 8 – ಭೀಮಸಮುದ್ರದ ಜಿ. ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಹಾಗೂ ಭಾನುವಳ್ಳಿಯ ಸ್ನೇಹ ಸಂಭ್ರಮ ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ, ಜಿಎಂಐಟಿ ತರಬೇತಿ ಮತ್ತು ಉದ್ಯೋಗ ವಿಭಾಗದ ಸಹಯೋಗದೊಂದಿಗೆ, ಹರಿಹರ ತಾಲ್ಲೂಕಿನ ಭಾನುವಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಾಳೆ ದಿನಾಂಕ 9 ರ ಭಾನುವಾರ ಬೃಹತ್ ಉದ್ಯೋಗ ಮೇಳ ನಡೆಯಲಿದೆ.

ಭಾನುವಳ್ಳಿ ಸೇರಿದಂತೆ, ಸುತ್ತಮುತ್ತಲಿನ ಸುಮಾರು 24ಕ್ಕೂ ಹೆಚ್ಚು ಗ್ರಾಮಗಳ 3000ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಈ ಮೇಳದಲ್ಲಿ ಸುಮಾರು 25ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. 3665 ಉದ್ಯೋಗಗಳು ಲಭ್ಯವಿವೆ ಎಂದು ಬಳಗದ ಗೌರವಾಧ್ಯಕ್ಷ ಟಿ.ಆರ್. ತೇಜಸ್ವಿ ಕಟ್ಟಿಮನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಮೇಳವನ್ನು ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ ಸೇರಿದಂತೆ ಗಣ್ಯರು ಭಾಗವಹಿಸುವರು. ವಿವರಕ್ಕೆ ಸಂಪರ್ಕಿಸಿ : 9964461461 ಅಥವಾ  9632135886.

ಪತ್ರಿಕಾಗೋಷ್ಠಿಯಲ್ಲಿ ಬಳಗದ ಅಧ್ಯಕ್ಷ ಎಚ್.ಎಮ್. ಶಿವಕುಮಾರ್, ಉಪಾಧ್ಯಕ್ಷ ಇ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಡಿ.ಬಿ. ರಾಮನಗೌಡ, ಸಂಘಟನಾ ಕಾರ್ಯದರ್ಶಿ ಆರ್.ಬಿ. ಫಕ್ಕೀರಪ್ಪ, ನಿರ್ದೇಶಕ ಪ್ರಶಾಂತ್ ರೆಡ್ಡಿ, ಮಹಿಳಾ ನಿರ್ದೇಶಕರುಗಳಾದ ಸರಳ, ಮಂಜುಳಾ, ರೂಪ ಇದ್ದರು.

error: Content is protected !!