ಹರಿಹರದಲ್ಲಿ ಇಂದು 108 ಸೂರ್ಯ ನಮಸ್ಕಾರ, ಯಜ್ಞ ಕಾರ್ಯಕ್ರಮ

ಯೋಗಕ್ಷೇಮ ಯೋಗ ಕೇಂದ್ರ, ಯಶಸ್ವಿ ಸೇವಾ ಕಿರಣ ಹಾಗೂ ತಪೋವನ ಯೋಗ ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಸಹಯೋಗದೊಂದಿಗೆ  ತುಂಗಭದ್ರಾ ನದಿಯ ದಂಡೆಯ ಮೇಲಿರುವ ತುಂಗಾರಾತಿ ಕಾರಿಡಾರ್ ಸ್ಥಳದಲ್ಲಿ ಇಂದು ಬೆಳಿಗ್ಗೆ  5.30 ರಿಂದ 9 ಗಂಟೆಯವರೆಗೆ ರಥ ಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ ಮತ್ತು ಯಜ್ಞ ಹಾಗೂ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಜಿ. ರವೀಂದ್ರ ಸಿಂಗ್ ತಿಳಿಸಿದ್ದಾರೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ತಪೋವನ ಛೇರ್ಮನ್ ಹಾಗೂ ಎಸ್‌.ಎಸ್.ಕೆ. ಸಮಾಜದ ರಾಜ್ಯಾಧ್ಯಕ್ಷ ಶಶಿಕುಮಾರ್, ವಿ. ಮೆಹರ್ವಾಡೆ ವಹಿಸಲಿದ್ದಾರೆ ಎಂದು ಹೇಳಿದರು. 

error: Content is protected !!