ದಾವಣಗೆರೆ, ಫೆ. 8 – ದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಜಯಗಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ನಗರದ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ನಾಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಮಾಜಿ ಸಚೇತಕ ಡಾ. ಎ.ಹೆಚ್ ಶಿವಯೋಗಿ ಸ್ವಾಮಿ, ಕೆ.ಎಂ. ಸುರೇಶ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಆರ್. ಶಿವಪ್ರಕಾಶ್, ಪಾಲಿಕೆ ಸದಸ್ಯ ಶಿವಾನಂದ, ಉತ್ತರ ಮಂಡಲದ ಅಧ್ಯಕ್ಷ ತಾರೇಶ್ ನಾಯಕ್, ಮುಖಂಡರಾದ ರಮೇಶ್ ನಾಯಕ್, ಸಂತೋಷ್ ಪೈಲ್ವಾನ್, ಕಿಶೋರ್, ಕೊಟ್ರೇಶ್ ಗೌಡ, ಕೆ.ವಿ ಗುರು, ಬೆಳ್ಳೂಡಿ ಮಂಜುನಾಥ್, ಕರಿಯಪ್ಪ, ಗುರುರಾಜ್ ಎನ್.ಎ., ಅಜ್ಜಂಪುರ ವರುಣ್, ರಾಜು, ಮಂಜಣ್ಣ ಹಾಗೂ ಇತರರು ಉಪಸ್ಥಿತಿಯಲ್ಲಿದ್ದರು.