ಹೊನ್ನಾಳಿ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಮನೋಜ ವಾಲಜ್ಜಿ

ಹೊನ್ನಾಳಿ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಮನೋಜ ವಾಲಜ್ಜಿ

ಹೊನ್ನಾಳಿ, ಫೆ. 9 – ಸೋಲು-ಗೆಲುವು ಪಕ್ಷದ ಆಂತರಿಕವಾಗಿದ್ದು, ಇದನ್ನೆಲ್ಲಾ ಬದಿಗಿರಿಸಿ ಕಾಂಗ್ರೆಸ್‌ ಪಕ್ಷ ಬಲಪಡಿಸಲು ನೂತನ ಪದಾಧಿಕಾರಿಗಳೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ನೂತನ ತಾಲ್ಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಮನೋಜ ವಾಲಜ್ಜಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ  ನೂತನವಾಗಿ ಆಯ್ಕೆಗೊಂಡ  ಪದಾಧಿಕಾರಿ ಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ಆಗಸ್ಟ್‌ ತಿಂಗಳು ಆನ್‍ಲೈನ್‌ನಲ್ಲಿ ನಡೆದ ಚುನಾವಣೆಯಲ್ಲಿ ನೂತನ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ 10,396 ಮತಗಳನ್ನು ಪಡೆದು ತಾವು ಆಯ್ಕೆಯಾಗಿರುವುದಾಗಿ ತಿಳಿಸಿದರು.

ಗಣೇಶ ಮದಕರಿ 2500 ಮತಗಳಿಂದ ಉಪಾಧ್ಯಕ್ಷರಾಗಿ, ಶ್ರೀಧರ  ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬಾಹುಬಲಿ 14,000 ಮತಗಳನ್ನು ಪಡೆದು ಆಯ್ಕೆಯಾಗಿದ್ದು, ಹೆಚ್‌.ಎ ರಂಜಿತ 4000 ಮತಗಳನ್ನು ಪಡೆದು ರಾಜ್ಯ  ಕಾರ್ಯದರ್ಶಿಯಾಗಿದ್ದಾರೆ.

 ಹೊನ್ನಾಳಿ ಬ್ಲಾಕ್‌ ಅಧ್ಯಕ್ಷ ಬಿ.ಆರ್. ವಿಜಯ ಕತ್ತಿಗೆ 4314 ಮತಗಳನ್ನು ಪಡೆದು ಅಧ್ಯಕ್ಷರಾಗಿ, ಸಾಸ್ವೇಹಳ್ಳಿ ಬ್ಲಾಕ್‌ ಅಧ್ಯಕ್ಷರಾಗಿ ಎಂ. ಸಚ್ಚಿನ್‌ 5647ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಪ್ರಶಾಂತ
ಬಣ್ಣಜ್ಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್‌.ಜಿ. ಪ್ರಕಾಶ್‌ ಸೇರಿದಂತೆ ಆಯ್ಕೆಗೊಂಡ ಪದಾಧಿಕಾರಿಗಳು, ಯುವ ಘಟಕದ ಮುಖಂಡರು ಉಪಸ್ಥಿತರಿದ್ದರು.

error: Content is protected !!