ಹರಪನಹಳ್ಳಿ, ಫೆ. 9 – ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ಶಾಸಕರಾದ ಶ್ರೀಮತಿ ಎಂ.ಪಿ ಲತಾ ಮಲ್ಲಿಕಾರ್ಜುನ್ ಶ್ರೀ ಈಶ್ವರ ದೇವರ ತೊಟ್ಟಿಲು ತೂಗುವ ಮೂಲಕ ಚಾಲನೆ ನೀಡಿದರು.
ಪಟ್ಟಣದ ಕೊಟ್ಟೂರು ರಸ್ತೆಯಲ್ಲಿರುವ ಶ್ರೀ ನಗರೇಶ್ವರ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜದವರು ಹಮ್ಮಿಕೊಂಡಿದ್ದ ಗಿರಿಜಾ ಕಲ್ಯಾಣ ಮಹೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿದರು.
ಆರ್ಯ ಸಮಾಜದ ಹಿರಿಯ ಅಧ್ಯಕ್ಷ ಡಾ.ಅನಂತಶೆಟ್ರು, ದಯಾನಂದ ಶೆಟ್ರು, ಬಿ.ಎಸ್.ರವಿಶಂಕರ್, ಮುದುಗಲ್ ನಾಗರಾಜ್ ಶೆಟ್ರು, ಕಡ್ಲಿ ರಾಘವೇಂದ್ರ ಶೆಟ್ರು ಕಾರ್ಯಕ್ರಮದ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಕಾರ್ಯದರ್ಶಿ ಎಚ್.ಸಿ.ನಟೇಶಕುಮಾರ್ ನಿರೂಪಿಸಿದರು. ಆರ್ಯ ಸಮಾಜದ ಮಹಿಳಾ ಅಧ್ಯಕ್ಷರಾದ ಸುಜಾತ, ಮಮತ, ನಿರ್ದೇಶಕರುಗಳಾದ ಜಿಲ್ಲಾ ಮಹಿಳಾ ಮಂಡಳಿಯವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ತೆಗ್ಗಿನಮಠದ ಪೀಠಾಧಿಪತಿ ಶ್ರೀ ವರಸದ್ಯೋಜಾತ ಮಹಾಸ್ವಾಮೀಜಿ, ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ವಿ ಅಂಜಿನಪ್ಪ, ಎಂ.ಪಿ.ರವೀಂದ್ರ ಪರಿಷತ್ತಿನ ಅಧ್ಯಕ್ಷ ಹಾಗೂ ಶಾಸಕರ ಪುತ್ರ ಗೌತಮ್ ಪ್ರಭು, ಪುರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷ ಟಿ.ವೆಂಕಟೇಶ್, ಮುಖಂಡರಾದ ಇಜಾರಿ ಮಹಾವೀರ್, ಶಶಿಕುಮಾರ್ ನಾಯ್ಕ್, ಗುಡಿ ನಾಗರಾಜ್ ಇತರರು ಉಪಸ್ಥಿತರಿದ್ದರು.