ದಾವಣಗೆರೆ, ಫೆ. 9 – ನಗರದ ಸವಿತಾ ಕ್ರೆಡಿಟ್ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷರೂ ಆದ ವಕೀಲ ಎನ್. ರಂಗಸ್ವಾಮಿ ನೇತೃತ್ವದ ಗುಂಪಿಗೆ ಭರ್ಜರಿ ಜಯ ಲಭಿಸಿದೆ.
ಎನ್. ರಂಗಸ್ವಾಮಿ, ಜಿ.ಸಿ.ಶ್ರೀನಿವಾಸ್, ಸಿ.ರಾಮಾಂಜನೇಯ, ಜೆ.ಮಂಜುನಾಥ್, ಎನ್. ಗೋವಿಂದರಾಜ್ ಅವರುಗಳು ಮತ್ತೊಂದು ಅವಧಿಗೆ ಪುನರಾಯ್ಕೆಯಾಗಿದ್ದು, ಇದೇ ತಂಡದಿಂದ ಪ್ರಥಮ ಬಾರಿಗೆ ಸ್ಪರ್ಧೆ ಮಾಡಿದ್ದ ಎಮ್. ಗಂಗಾಧರ್, ಜಿ.ಟಿ.ಮಂಜುನಾಥ್, ಜಿ.ಆರ್. ಪಾಂಡುರಂಗ ವಿಠ್ಠಲ ಜಯ ಗಳಿಸಿದ್ದಾರೆ.
ಮಹಿಳಾ ನಿರ್ದೇಶಕರಾಗಿ ಶ್ರೀಮತಿ ಸಂಜೀವಮ್ಮ, ಶ್ರೀಮತಿ ಸುವರ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.