ಶ್ರೀ ಕಾಳಿಕಾಂಬಾ, ಗುರು ಮೌನೇಶ್ವರ ಸೇವಾ ಸಮಿತಿ ಹಾಗೂ ವಿಶ್ವಕರ್ಮ ಸಮಾಜದದಿಂದ ಇಂದು ಶ್ರೀ ಜಗದ್ಗುರು ಮೌನೇಶ್ವರ ಸ್ವಾಮಿ ಜಯಂತ್ಯೋತ್ಸವ ಸಮಾರಂಭವನ್ನು ಹಳೆ ಭರಂ ಪುರ ಬಡಾವಣೆಯ ಶ್ರೀ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಿ.ಪಿ. ರಾಜಾಚಾರ್ಯ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಜಿ.ಬಿ. ವೀರೇಶ್ ಆಚಾರ್ಯರವರ ನೇತೃತ್ವದಲ್ಲಿ ಉಪನಯನ, ವಿವಾಹ, ಜವಳ ಹಾಗೂ ಅಕ್ಷತಾರೋಹಣ. ಶ್ರೀ ಗುರು ಮೌನೇಶ್ವರ ಸ್ವಾಮಿಯ ಪಾಲಕಿ ಉತ್ಸವ ನಡೆಯಲಿದೆ. 11-30ಕ್ಕೆ ನಡೆಯಲಿರುವ ಧಾರ್ಮಿಕ ಸಮಾರಂಭದ ಸಾನ್ನಿಧ್ಯವನ್ನು ಅಂತರವಳ್ಳಿ ಶ್ರೀ ಗುರು ನಿರಂಜನ ಮಹಾಸ್ವಾಮಿಗಳು, ಹುಲಗೂರು ಶ್ರೀ ಮೌನೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸೇವಾ ಸಮಿತಿ ಅಧ್ಯಕ್ಷ ಡಿ.ಪಿ. ರಾಜಾಚಾರ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್, ಬಿ.ಪಿ. ಹರೀಶ್, ಹೆಚ್.ಎಸ್. ಶಿವಶಂಕರ್ ಮತ್ತಿತರರು ಆಗಮಿಸುವರು.