ದಾವಣಗೆರೆ, ಫೆ. 5 – ನಗರದ ಸರ್ಕಾರಿ ಪ್ರಥಮ ಕಾಲೇಜಿನ ಸ್ನಾತಕೊತ್ತರ ನಿರ್ವಹಣಾ ಶಾಸ್ತ್ರ (ಎಂಬಿಎ) ವಿಭಾಗದ ವಿದ್ಯಾರ್ಥಿಗಳು ದಾವಣಗೆರೆ ವಿಶ್ವವಿದ್ಯಾನಿಲಯದ 2023-24 ಸಾಲಿನ ಸೆಪ್ಟಂಬರ್ನಲ್ಲಿ ನಡೆದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅತಿ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯನ್ನು ಪಡೆದಿರುತ್ತಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಬಿ. ಹಾಲ ಶಂಕರ್ ಮತ್ತು ರಶ್ಮಿ ಎಸ್. ನಾಯ್ಕ 9ನೇ ಸ್ಥಾನ ಹಾಗೂ ಬಿಂದು ಜಿ.ಎಸ್. 10ನೇ ಸ್ಥಾನವನ್ನು ಪಡೆದಿದ್ದಾರೆ.