ಶಿವ ಸೊಸೈಟಿ ಚುನಾವಣೆ : 9 ಕ್ಷೇತ್ರದಲ್ಲಿ ಅವಿರೋಧ ಆಯ್ಕೆ, 6 ಕ್ಷೇತ್ರಕ್ಕೆ ಚುನಾವಣೆ

ಶಿವ ಸೊಸೈಟಿ ಚುನಾವಣೆ : 9 ಕ್ಷೇತ್ರದಲ್ಲಿ ಅವಿರೋಧ ಆಯ್ಕೆ, 6 ಕ್ಷೇತ್ರಕ್ಕೆ ಚುನಾವಣೆ

ಹೊನ್ನಾಳಿ, ಫೆ.5- ಶಿವ-ಕೋ ಸೊಸೈಟಿಯ 15 ಕ್ಷೇತ್ರಗಳಲ್ಲಿ 9 ನಿರ್ದೇಶಕರ ಅವಿರೋಧ ಆಯ್ಕೆ ಮಾಡುವಲ್ಲಿ ಸಾದು ಸಮಾಜದ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ಅಧ್ಯಕ್ಷರು ಹಾಗೂ ಮುಖಂಡರ ನೇತೃತ್ವದ ಸಭೆಯು ಯಶಸ್ವಿಯಾಗಿದೆ.

ಉಳಿದ 6 ಕ್ಷೇತ್ರಗಳ 19 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದು, ಇದೇ ದಿನಾಂಕ 9ರ ಭಾನುವಾರ ಮೃತ್ಯುಂಜಯ ಪದವಿ ಕಾಲೇಜಿನಲ್ಲಿ ಮತದಾನ ನಡೆಯಲಿದೆ.

9 ಅಭ್ಯರ್ಥಿಗಳು ಕ್ಷೇತ್ರವಾರು ಆಯ್ಕೆಗೊಂ ಡಿದ್ದು, (ಅರಕೆರೆ) ಬಿ.ಜಿ ಶಿವಮೂರ್ತಿ, (ಕೂಲಂಬಿ) ಎಂ.ಜಿ ಲೋಕೇಶ್‌, (ಗೋವಿನಕೋವಿ) ಮಂಜುಳ, (ನ್ಯಾಮತಿ) ಗದ್ದಿಗೇ ಶಾಚಾರ ಪ.ಜಾ, (ಸಾಲಬಾಳು) ಗೋಪಾಲನಾಯ್ಕ, ಪ.ಪಂ (ಬೆಲೆಮಲ್ಲೂರು) ಶಿವಾನಂದಪ್ಪ, (ಸವಳಂಗ) ಟಿ. ಚಂದ್ರಪ್ಪ, (ಅರಬಗಟ್ಟೆ) ಎ.ಜಿ ಪ್ರಕಾಶ, (ಹೊನ್ನಾಳಿ) ಬಿ.ಪಿ ರಂಗನಾಥ ಇವರೆಲ್ಲರೂ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಕುಂದೂರು ಬೆನಕನಹಳ್ಳಿ, ಸಾಸ್ವೇಹಳ್ಳಿ, ಚೀಲೂರು, ಸುರಹೊನ್ನೆ, ಬೆಳಗುತ್ತಿ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಕಾರ್ಯದರ್ಶಿ ರುದ್ರೇಶ ತಿಳಿಸಿದ್ದಾರೆ.

error: Content is protected !!