ನಗರದಲ್ಲಿ ಇಂದಿನಿಂದ 9 ರವರೆಗೆ 60 ನೇ ವರ್ಷದ ದಿಂಡಿ ಮಹೋತ್ಸವ

ಬಂಬೂಬಜಾರ್ ಗೋಂದಳಿ ಸಮಾಜದ ಶ್ರೀ ವಿಠಲ ರುಖುಮಾಯಿ ಹರಿ ಮಂದಿರದಲ್ಲಿ 60 ನೇ ವರ್ಷದ ದಿಂಡಿ ಮಹೋತ್ಸವದ ಅಂಗವಾಗಿ ವಿಶ್ವಶಾಂತಿಗಾಗಿ ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮುದಾಯಿಕ ಪಾರಾಯಣ ಮತ್ತು ಅಖಂಡ ಹರಿನಾಮ ಸಪ್ತಾಹ ಇಂದಿನಿಂದ ಇದೇ ದಿನಾಂಕ 9 ರವರೆಗೆ ನಡೆಯಲಿದೆ.

ಪ್ರತಿ ದಿನ ಬೆಳಿಗ್ಗೆ 4 ರಿಂದ 6 ಕಾಕಡಾರತಿ, ಬೆಳಿಗ್ಗೆ 7 ರಿಂದ 12 ರವರೆಗೆ ಸಾಮುದಾಯಿಕ ಪಾರಾಯಣ, ಸಂಜೆ 4.30 ರಿಂದ 6 ರವರೆಗೆ ನಾಮಜಪ, ಪ್ರವಚನ, ರಾತ್ರಿ 7 ರಿಂದ 9 ರವರೆಗೆ ಕೀರ್ತನೆ, ರಾತ್ರಿ 10.30 ರಿಂದ 1 ರವರೆಗೆ ಸಂಗೀತ, ಭಜನೆ, ಭಾರೂಡ ವ ಕಾರ್ಯಕ್ರಮಗಳು ಜರುಗಲಿವೆ.

ದಿನಾಂಕ 7 ರ ಮಧ್ಯಾಹ್ನ 12 ರಿಂದ 1 ರವರೆಗೆ ಶ್ರೀ ಜಗದ್ಗುರು ತುಕಾರಾಮ್ ಮಹಾರಾಜ್ ಅನುಗ್ರಹದ ನಿಮಿತ್ಯ ಕೀರ್ತನೆ ಏರ್ಪಡಿಸಲಾಗಿದೆ. ಫೆ. 5 ರಂದು ಅಥಣಿಯ ತುಕಾರಾಂ ಹಜಾರ ಅವರಿಂದ ಕೀರ್ತನೆ, ಫೆ. 6 ರಂದು ಜಮಖಂಡಿಯ ಸುನಿಲ್ ಬಾಬರ್  ಅವರಿಂದ ಕೀರ್ತನೆ, ಫೆ. 7 ರಂದು ಲಕ್ಷ್ಮೇಶ್ವರದ ನಾರಾಯಣ ನಭಿಸೆ ಅವರ, ಫೆ. 8 ರಂದು ದೂಪದಾಳದ ಯಶವಂತ ಅಟಕ್ ಅವರಿಂದ ಕೀರ್ತನೆ ನಡೆಯಲಿದೆ. 

error: Content is protected !!