ದಾವಣಗೆರೆ, ಫೆ. 5- ನಗರದ ಪ್ರತಿಷ್ಠಿತ ಕೋ-ಆಪ ರೇಟಿವ್ ಸೊಸೈಟಿಗಳಲ್ಲೊಂ ದಾದ ಶ್ರೀ ಶ್ರೀಶೈಲ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಯ ಅಧ್ಯಕ್ಷ ರಾಗಿ ಸಂಘದ ಹಾಲಿ ಅಧ್ಯಕ್ಷ ಆರ್. ವೆಂಕಟರೆಡ್ಡಿ, ಉಪಾಧ್ಯಕ್ಷರಾಗಿ ಸಂಘದ ಹಾಲಿ ಉಪಾಧ್ಯಕ್ಷ ವಿ. ಪ್ರಕಾಶ್ ಅವರುಗಳು ಮತ್ತೊಂದು ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಆಡಳಿತ ಮಂಡಳಿಗೆ ಕಳೆದ 2025, ಜನವರಿ 24ರಂದು ನಡೆದ ಚುನಾವಣೆಯಲ್ಲಿ ನೂತನ ಆಡಳಿತ ಮಂಡಳಿ ಆಯ್ಕೆಯಾದ ನಂತರ ಸಂಘದ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ಸಂಘದ ನೂತನ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಆರ್. ವೆಂಕಟರೆಡ್ಡಿ ಅವರ ಹೆಸರನ್ನು ನಿರ್ದೇಶಕ ಎನ್. ಆನಂದ್ ಸೂಚಿಸಿದಾಗ ನಿರ್ದೇಶಕ ಕೆ.ಬಿ. ನಾಗರಾಜ್ ಅನುಮೋದಿಸಿದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ವಿ.ಪ್ರಕಾಶ್ ಅವರ ಹೆಸರನ್ನು ನಿರ್ದೇಶಕ ಟಿ.ಹೆಚ್. ರಾಜಶೇಖರ್ ಸೂಚಿಸಿದರೆ ನಿರ್ದೇಶಕ ಜಿ.ಆರ್. ರಾಜಾನಾಯ್ಕ ಅನುಮೋದಿಸಿದರು.
ನಿರ್ದೇಶಕರುಗಳಾದ ಬಿಜ್ಜುಂ ವೆಂಕಟೇಶ್ವರ ರೆಡ್ಡಿ, ಮೇಕಾ ಮುರುಳೀಕೃಷ್ಣ, ಬಿ. ವೆಂಕಟೇಶ್ವರ ರೆಡ್ಡಿ, ಬಿ. ಯೋಗಿರೆಡ್ಡಿ, ಡಿ. ಬ್ರಹ್ಮಾನಂದ ರೆಡ್ಡಿ, ಶ್ರೀಮತಿ ಎ. ಶ್ರೀದೇವಿ ತಿಮ್ಮಾರೆಡ್ಡಿ, ಶ್ರೀಮತಿ ವೈ. ಸರೋಜಾ ಅವರುಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ದಾವಣಗೆರೆ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಶ್ರೀಮತಿ ಎಸ್. ಮಂಜುಳಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಮನಾರಾಯಣ ರೆಡ್ಡಿ, ವ್ಯವಸ್ಥಾಪಕ ಕೆ. ರಾಘವೇಂದ್ರರಾವ್ ಚುನಾವಣಾಧಿಕಾರಿಗಳಿಗೆ ಸಹಕಾರ ನೀಡಿದರು.