ದಾವಣಗೆರೆ, ಫೆ.1 – ಬಜೆಟ್ ಮೇಲೆ ನಮಗೆ ನಿರೀಕ್ಷೆ ಇಲ್ಲ. ಮೋದಿಯವರ ಮಾ ಸ್ಟರ್ ಸ್ಟ್ರೋಕ್‌ನಿಂದ ನಿರುದ್ಯೋಗ ತಾಂಡವ ಆಡುತ್ತಿದೆ. ಮಧ್ಯಮ ವರ್ಗದ ಜನರ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಯಾವ ರೀತಿ ಸ್ಪಂದಿಸಿದೆ?. ಒಂದು ರೀತಿ ವಿದ್ಯುತ್ ಕಂಬವಿದ್ದರೂ ಬೆಳಕಿಲ್ಲದ ದೀಪವಿದ್ದಂತಿದೆ ಕೇಂದ್ರ ಬಜೆಟ್ ಎಂದು ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಕಿಡಿ ಕಾರಿದ್ದಾರೆ.
ಬಜೆಟ್ : ಬೆಳಕಿಲ್ಲದ ದೀಪವಿದ್ದಂತೆ
