ನಗರದಲ್ಲಿಂದು 11ನೇ ತಾ.ಕನ್ನಡ ಸಾಹಿತ್ಯ ಸಮ್ಮೇಳನ

ನಗರದಲ್ಲಿಂದು 11ನೇ ತಾ.ಕನ್ನಡ ಸಾಹಿತ್ಯ ಸಮ್ಮೇಳನ

ನಗರದಲ್ಲಿ ಇಂದು `ಬಯಲು ಕಲಾ ಪ್ರದರ್ಶನ’

ದಾವಣಗೆರೆ ಕಲಾ ಪರಿಷತ್ತು ವತಿಯಿಂದ ಕುವೆಂಪು ಕನ್ನಡ ಭವನದಲ್ಲಿ ಇಂದು ಬೆಳಗ್ಗೆ 8ರಿಂದ ರಾತ್ರಿ 9ರ ವರೆಗೆ `ಬಯಲು ಕಲಾ ಪ್ರದರ್ಶನ’ ನಡೆಯಲಿದೆ.

ಕಲಾವಿದರಾದ ಎ. ಮಹಲಿಂಗಪ್ಪ, ಶಾಂತಯ್ಯ ಪರಡಿಮಠ್, ಬಿ.ಅಚ್ಚುತಾನಂದ, ಕೆ.ಎಸ್‌. ಶಶಿಕುಮಾರ್‌ ಭಾಗವಹಿಸಲಿದ್ದಾರೆ.

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕುವೆಂಪು ಕನ್ನಡ ಭವನದಲ್ಲಿ 11ನೇ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ  ತಿಳಿಸಿದರು.

ಬೆಳಿಗ್ಗೆ 8 ಗಂಟೆಗೆ ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಬೆಳಿಗ್ಗೆ 9 ಕ್ಕೆ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರಾದ ಶಿವಾನಂದ ಗುರೂಜಿ ಅವರ ಮೆರವಣಿಗೆ ನಡೆಯಲಿದೆ.

ತಾ.ಪಂ. ಇಓ ರಾಮಭೋವಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಬಸವ ಕಲಾ ಲೋಕದ ನಂದಿಕೋಲು, ದುರ್ಗಮ್ಮ ದೇವಿ ತಂಡದ ಕೋಲಾಟ, ನಾಸಿಕ್ ಡೋಲ್, ಸಹನಾ ಇಂಟರ್ ನ್ಯಾಷನಲ್ ಶಾಲೆ ಮಕ್ಕಳಿಂದ ವಿವಿಧ ವೇಷಭೂಷಣಗಳ ಪ್ರದರ್ಶನ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ.

ಬೆಳಿಗ್ಗೆ 10 ಗಂಟೆಗೆ ಸಮ್ಮೇಳನದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಲಿದ್ದು, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು.

ಹಿರಿಯ ಸಾಹಿತಿ ಡಾ. ಲೋಕೇಶ್‌ ಅಗಸನಕಟ್ಟೆ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಎಸ್ಪಿ ಉಮಾ ಪ್ರಶಾಂತ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯರಾದ ಗೀತಾ ದಿಳ್ಳೆಪ್ಪ, ವೀಣಾ ನಂಜಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 1.30 ಕ್ಕೆ ಸಾಹಿತ್ಯ ಚಿಂತನ-ಮಂಥನ ಗೋಷ್ಠಿ ನಡೆಯಲಿದ್ದು, ದಾವಣಗೆರೆ ತಾಲ್ಲೂಕಿನ ಸಾಹಿತ್ಯ ಕ್ಷೇತ್ರದ ಸಾಧಕರ ವಿಷಯ ಕುರಿತು ಸಾಹಿತಿ ಡಾ.ಎ.ಬಿ.ರಾಮಚಂದ್ರಪ್ಪ ಹಾಗೂ ಮಕ್ಕಳು, ಯುವಕರು, ಮಹಿಳೆಯರ ಮುಂದಿರುವ ಸವಾಲುಗಳ ಬಗ್ಗೆ ಡಾ. ಪಿ.ಎಂ.ಅನುರಾಧ, ಕನ್ನಡ ಕಟ್ಟುವಲ್ಲಿ ತಂತ್ರಜ್ಞಾನದ ಪಾತ್ರ ಕುರಿತು ವೆಂಕಪ್ಪನವರ ಬಸವರಾಜ ಮಾತನಾಡಲಿದ್ದಾರೆ. ಡಾ. ಶಶಿಕಲಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.

ನಂತರ 2.30ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಸಂಜೆ 4 ಗಂಟೆಗೆ ದಾವಣಗೆರೆ ತಾಲ್ಲೂಕಿನಲ್ಲಿ ಕಂಡು ಬರುವ ಪ್ರಮುಖ ಶಾಸನಗಳ ಕುರಿತು ಡಾ.ಬುರುಡೇಕಟ್ಟೆ ಮಂಜಪ್ಪ ವಿಶೇಷ ಉಪನ್ಯಾಸ ನೀಡಲಿದ್ದಾರೆ. 

ಸಂಜೆ 4.30 ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು, ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಇದೇ ವೇಳೆ ಸಾಧಕರಿಗೆ ಸನ್ಮಾನ ಸಹ ನಡೆಯಲಿದೆ. ಸಂಜೆ 6.30 ಕ್ಕೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

error: Content is protected !!