ದಾವಣಗೆರೆ, ಜ.30- ತಾಲ್ಲೂಕಿನ ಹಿಂಡಸಕಟ್ಟೆಯಿಂದ ಕ್ಯಾತನಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ನಡೆಯುತ್ತಿದ್ದ ಅಕ್ರಮ ಇಸ್ಫೀಟ್ ಜೂಜಾಟದ ಮೇಲೆ ಪೊಲೀಸರು ಬುಧವಾರ ಸಂಜೆ ದಾಳಿ ನಡೆಸಿದ್ದಾರೆ. ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 13 ಆಪಾದಿತರನ್ನು ಬಂಧಿಸಿದ್ದು, ಇವರಿಂದ 2.05 ಲಕ್ಷ ರೂ. ನಗದು ಹಾಗೂ ಇಸ್ಪೀಟ್ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಎಸ್ಐ ಸುನೀಲ್ ಬಿ. ತೇಲಿ ಹಾಗೂ ಸಿಬ್ಬಂದಿಗಳಾದ ಪ್ರಕಾಶ್, ಸುರೇಶ್, ಗೋವಿಂದರಾಜು, ಮುತ್ತುರಾಜು, ಬುಡೇನ್ ವಲಿ, ಲೋಹಿತ್, ಮಲ್ಲಿಕಾರ್ಜುನ, ಶಿವಕುಮಾರ ಮತ್ತು ಅಂಜಿನಪ್ಪ ಅವರನ್ನೊಳಗೊಂಡ ತಂಡ ಯಶಸ್ವಿಯಾಗಿ ದಾಳಿ ನಡೆಸಿದ್ದು, ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
April 21, 2025