ಕೂಲಂಬಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿ ಟಿ.ಇ. ವಿನಾಯಕ ಆಯ್ಕೆ

ಕೂಲಂಬಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿ ಟಿ.ಇ. ವಿನಾಯಕ ಆಯ್ಕೆ

ಹೊನ್ನಾಳಿ,28- ತಾಲ್ಲೂಕಿನ ಕೂಲಂಬಿ ಪ್ರಾಥಮಿಕ ಕೃಷಿ ಪತ್ತಿನ  ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಇ. ವಿನಾಯಕ,  ಉಪಾಧ್ಯಕ್ಷರಾಗಿ ಎಚ್.ಎ. ನಾಗರತ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಜಿ. ಜಗದೀಶ್ ತಿಳಿಸಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕರಾದ ಕೆ.ಜೆವ. ರೇವಣಸಿದ್ದಪ್ಪ, ಇ. ಜಗದೀಶ್, ಟಿ.ಎನ್. ಮಂಜುನಾಥ್, ಬಿ.ಎಸ್. ಲಿಂಗರಾಜ್, ಬಿ. ನಂದೀಶ್, ಜಿ.ವಿ. ಪುಷ್ಪಾ, ಜಿ.ಎಸ್. ಶೇಖರಪ್ಪ, ಇನಾಯತ್ ಉಲ್ಲಾ, ಸರಸ್ವತಮ್ಮ, ಎ.ಕೆ. ಹಾಲಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ. ಅನಿತಾ,  ಕ್ಷೇತ್ರಾಧಿಕಾರಿ ಎಚ್.ಬಿ. ಸುರೇಶ್ ಉಪಸ್ಥಿತರಿದ್ದರು. ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆಂಗಲಹಳ್ಳಿ ಕೆ.ಎಚ್. ಷಣ್ಮುಖಪ್ಪ, ಹಾಲಿ ನಿರ್ದೇಶಕ ಡಿ.ಜಿ. ಸುರೇಂದ್ರಗೌಡ ಹಾಗೂ ಕೂಲಂಬಿ ಮತ್ತು ಯರೇಚಿಕ್ಕನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.

error: Content is protected !!