ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ
ದಾವಣಗೆರೆ, ಜ. 28- ಸ್ವತಂತ್ರ್ಯ ಭಾರತದಲ್ಲಿ ಜನವರಿ 26,1950 ರಂದು ಸಂವಿಧಾನ ಜಾರಿಗೆ ಬಂದ ದಿನ. ಅದರ ಗೌರವಾರ್ಥವಾಗಿ ಪ್ರತಿವರ್ಷದಂತೆ ಗಣರಾಜ್ಯೋತ್ಸವವನ್ನು ದೇಶದೆಲ್ಲೆಡೆ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಾರತ ಸ್ವತಂತ್ರ ಮತ್ತು ಪ್ರಜಾಪ್ರಭುತ್ವದ ಆದರ್ಶಗಳಿಗೆ ದೇಶದ ಬದ್ಧತೆಯನ್ನು ಆಚರಿಸುವ ದಿನ ಇದಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ನ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.
ಕುವೆಂಪು ಕನ್ನಡ ಭವನದಲ್ಲಿ 76 ನೇ ಗಣ ರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಧ್ವಜಾ ರೋಹಣ ಮಾಡಿ ಅವರು ಮಾತನಾಡಿದರು.
ನಮ್ಮ ಸಂವಿಧಾನ ರೂಪಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ ಕೊಡುಗೆ ಮಹತ್ವ ದ್ದಾಗಿದೆ. ಇವರು ಸಂವಿಧಾನದಲ್ಲಿ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವದ ತತ್ವಗಳನ್ನು, ಮೌಲ್ಯಗಳನ್ನು ಅಳವಡಿಸಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವದ ಚೌಕಟ್ಟಿಗೆ ಭದ್ರ ಬುನಾದಿಯಾಯಿತು. ಸಂವಿಧಾನ ವನ್ನು 2 ವರ್ಷ 11 ತಿಂಗಳು 18 ದಿನಗಳಲ್ಲಿ ರಚನೆ ಮಾಡಿದ್ದು, ಅದರಲ್ಲಿ 12 ಅನುಚ್ಚೇದಗಳು, 25 ಭಾಗಗಳು 470 ವಿಧಿಗಳು ಅಡಕವಾಗಿವೆ.ಇಲ್ಲಿ ಪ್ರಜೆಗಳೇ ಪ್ರಭುಗಳು, ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ವದ್ದಾಗಿದೆ. ಇಂದು ನಾವು ನೀವೆಲ್ಲರೂ ಇದರ ಮೌಲ್ಯಗಳನ್ನು, ನಿಯಮಗಳನ್ನು ಪಾಲಿಸಬೇಕಾಗಿದೆ ಎಂದು ವಾಮದೇವಪ್ಪತಿಳಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಪ್ರತಿಜ್ಞಾ ವಿಧಿ ಭೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ.ಸಾ.ಪ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ಪದಾಧಿಕಾರಿಗಳಾದ ಎನ್.ಎಸ್. ರಾಜು, ಭೈರೇಶ್ವರ, ಸುದರ್ಶನ್, ರುದ್ರಾಕ್ಷಿಬಾಯಿ, ತಾಲ್ಲೂಕು ಕ.ಸಾ.ಪ. ಪದಾಧಿಕಾರಿಗಳಾದ ಬಿ.ವಿ. ಪರಿಮಳ ಜಗದೀಶ್, ವೀಣಾ ಕೃಷ್ಣ ಮೂರ್ತಿ, ರೇಖಾ ಓಂಕಾರಪ್ಪ, ಕೆ. ಶಿವಶಂಕರ್ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ. ಪರಮೇಶ್ವರಪ್ಪ, ಸಿದ್ದೇಶಪ್ಪ ಆರ್., ಭರಮಪ್ಪ ಮೈಸೂರ್, ಗರಗ ಕುಮಾರಪ್ಪ, ಮರುಳಸಿದ್ದಪ್ಪ ಯರೇಚಿಕ್ಕನಹಳ್ಳಿ, ಕುಲಕರ್ಣಿ, ವಿನೂತನ ಮಹಿಳಾ ಸಮಾಜದ ಅಧ್ಯಕ್ಷರಾದ ಜಿ.ಎಸ್. ಪ್ರೇಮಾ, ಮಮತಾ ಶ್ರೀಧರ್, ವೀಣಾ ಮಹಾಂತೇಶ್, ಕುಸುಮ ಲೋಕೇಶ್, ವಿನೋದ ಉಪಸ್ಥಿತರಿದ್ದರು.
ವಿನೂತನ ಮಹಿಳಾ ಸಮಾಜದ ಸದಸ್ಯರು ರಾಷ್ಟಗೀತೆ, ಧ್ವಜ ಗೀತೆ ಹಾಡಿದರು.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ ಸ್ವಾಗತಿಸಿದರು.
ಸತ್ಯಭಾಮ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಸೇವಾದಳದ ಎ.ಆರ್.ಗೋಪಾಲಪ್ಪ, ಹೆಚ್. ಹನುಮಂತಪ್ಪ ಧ್ವಜ ನಿರ್ವಹಣೆ ನೆರವೇರಿಸಿದರು.