ವರದಿಗಾರರ ಕೂಟದ ಕಚೇರಿಗೆ ಪಾಲಿಕೆ ಕೊಠಡಿ

ವರದಿಗಾರರ ಕೂಟದ ಕಚೇರಿಗೆ ಪಾಲಿಕೆ ಕೊಠಡಿ

ದಾವಣಗೆರೆ, ಜ. 28- ಮಹಾನಗರ‌ ಪಾಲಿಕೆಯ ಹಿಂಭಾಗದಲ್ಲಿನ ರೆಡ್ ಬಿಲ್ಡಿಂಗ್ ಕಟ್ಟಡವನ್ನು ಜಿಲ್ಲಾ ವರದಿಗಾರರ ಕೂಟದ ಕಚೇರಿಗೆ ನೀಡಲು ಶೀಘ್ರವೇ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದ್ದಾರೆ.

ಪತ್ರಕರ್ತರ ಮನವಿಯ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅವರು, ಬೆಂಗಳೂರು ಹಾಗೂ ಬೆಳಗಾವಿ ಮಾದರಿಯಲ್ಲಿ ದಾವಣಗೆರೆ ಪತ್ರಕರ್ತರ ಭವನ‌ ನಿರ್ಮಾಣವಾಗಬೇಕು. ಈ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ಉಪಯುಕ್ತವಾಗುವಂತಹ ಹಾಗೂ ಸೂಕ್ತವಾದ ಸ್ಥಳದ ಆಯ್ಕೆ ಮಾಡಲಾಗಿದೆ ಎಂದರು.

ಪಾಲಿಕೆಯ ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರುಗಳು ಪತ್ರಕರ್ತರ ಹಿತ ಕಾಪಾಡಲು ಸದಾ ಮುಂದಿದ್ದಾರೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ಡಿ.ಬಸವರಾಜ್, ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನಿ ಗಣೇಶ್,  ಮೀನಾಕ್ಷಿ ಜಗದೀಶ್, ಸುಧಾ ಇಟ್ಟಿಗುಡಿ ಮಂಜುನಾಥ್, ಪಾಲಿಕೆ ಸದಸ್ಯ ಎಲ್.ಎಂ.ಹೆಚ್. ಸಾಗರ್, ಜಾಕೀರ್ ಅಲಿ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್.ಬಡದಾಳ್ ಉಪಾಧ್ಯಕ್ಷರಾದ ಕೆ.ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಂ.ವೈ ಸತೀಶ್, ಖಜಾಂಚಿ ಇ. ಪವನ್ ಕುಮಾರ್ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!