ದಾವಣಗೆರೆ, ಜ. 28- ಇಂಡೋನೇಷ್ಯಾದ ಬಾಲಿ ನಗರದ ಆಸ್ಟನ್ ಕಾನ್ಫರೆನ್ಸ್ ಹಾಲ್ನಲ್ಲಿ ಕಳೆದ ವಾರ ನಡೆದ 47ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕೋತ್ಸವದಲ್ಲಿ ನಗರದ ನಮನ ಅಕಾಡೆಮಿ ತಂಡದ ಗುರು ವಿದುಷಿ ಶ್ರೀಮತಿ ಮಾಧವಿ ಡಿ.ಕೆ. ಮತ್ತು ಅವರ ಶಿಷ್ಯರು ಲಘು ಶಾಸ್ತ್ರೀಯ ಮತ್ತು ಆಧುನಿಕ ನೃತ್ಯಗಳನ್ನು ಮನಮೋಹಕವಾಗಿ ಪ್ರದರ್ಶಿಸಿದರು.
ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಗ್ಲೋಬಲ್ ಪೀಸ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಬಾಲಿಯ ಸ್ಥಳೀಯ ಕಲಾವಿದರ ಸಾಂಪ್ರದಾಯಿಕ ನೃತ್ಯ ಬರೊಂಗ್ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಪೂರ್ಣಿಮಾ ಸತೀಶ್ ಮತ್ತು ಆರತಿ ಸುರೇಶ್ ಅವರ ನೃತ್ಯ, ಪ್ರೊ. ಬಿಂಡಿಗ ನವಿಲೆ ಭಗವಾನ್ ಅವರ ಕವನ ವಾಚನ ಮತ್ತು ಪ್ರಶಾಂತ್ ಮೈಸೂರು ಅವರ ವಿಶ್ವ ಸೌಹಾರ್ದತೆ ಕುರಿತ ಸಂದೇಶ ಚೆನ್ನಾಗಿ ಮೂಡಿ ಬಂದವು.
ಈ ಸಂದರ್ಭದಲ್ಲಿ ಇಂಡೋನೇಷ್ಯಾ ಬಾಲಿಯ ಬಿಸಿನೆಸ್ ಅಡ್ವೈಸರ್ ಶ್ರೀಮತಿ
ನ್ಯೂ ಮ್ಯಾನ್ ಸ್ರಿ, ನಿವೃತ್ತ ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್, ಉಪಸ್ಥಿತರಿದ್ದು ಮಾತನಾಡಿದರು.