ಯುವಕರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ : ಡಾ. ಹೆಚ್.ವಿ. ವಾಮದೇವಪ್ಪ

ದಾವಣಗೆರೆ, ಜ. 27- ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶ. ಯುವಕರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಯುವಜನತೆ ದಿಕ್ಕು ತಪ್ಪಿ ಸಾಗಬಾರದು. ಚಿಕ್ಕಂದಿನಿಂದಲೇ ಮಹತ್ವದ ಗುರಿಗಳನ್ನು ಹೊಂದಿರಬೇಕು. ಚಿಕ್ಕ ಗುರಿಗಳನ್ನು ಹೊಂದಿರುವುದು ಅಪರಾಧ ಎಂದು ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿ ಕಾರಿ ಡಾ. ಹೆಚ್.ವಿ.  ವಾಮದೇವಪ್ಪ ಹೇಳಿದರು.

ನಗರದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಗನೂರು ಬಸಪ್ಪ ಅವರು ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಮಾಗನೂರು ಸಂಗಮೇಶ್ವರ ಗೌಡ್ರು ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ ಶ್ರದ್ಧೆಯಿಂದ, ನಿಸ್ವಾರ್ಥ ಸೇವಾ ಮನೋಭಾವನೆಯಿಂದ ದುಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಕಾಲೇಜಿನ ನಿರ್ದೇಶಕ ಡಾ. ಜಿ.ಎನ್. ಹೆಚ್. ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೆ.ಆರ್. ಯಶವಂತ ಕುಮಾರ್ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕ ಕೆ. ಹರ್ಷಿತ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಮಮತ ರೋನಾಲ್ಡ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಪುರಸ್ಕೃತರ ಪರವಾಗಿ ಹೆಚ್.ಆರ್. ಭರತ್ ಅನಿಸಿಕೆ ಹಂಚಿಕೊಂಡರು.

ಹೆಚ್‌. ಪೂಜಾರ್ ಪ್ರಾರ್ಥಿಸಿದರು. ಪ್ರಾಚಾರ್ಯ ಪ್ರಸಾದ್ ಬಂಗೇರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.   ಸುರೇಖ ಜಗದೀಶ ನಿರೂಪಿಸಿದರು. ಉಪನ್ಯಾಸಕಿ ಬಿ. ಚಂದನ್ ವಂದಿಸಿದರು. ಜಿ.ಎಸ್. ಕಾದಂಬರಿ ಮತ್ತು ಜೀಷ್ಣುಪ್ರೇಮ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!