ಎಐಡಿಎಸ್ಓನಿಂದ ನೇತಾಜಿ ಜನ್ಮ ದಿನಾಚರಣೆ

ಎಐಡಿಎಸ್ಓನಿಂದ ನೇತಾಜಿ ಜನ್ಮ ದಿನಾಚರಣೆ

 ದಾವಣಗೆರೆ, ಜ. 23- ಎಐಡಿಎಸ್ಓ  ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನ  ಆಚರಿಸಲಾಯಿತು.

ನಗರದ ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜು, ಜೆ.ಐ.ಟಿ ಪಾಲಿಟೆಕ್ನಿಕ್, ಡಿ.ಆರ್.ಎಂ. ಪದವಿ ಪೂರ್ವ ಕಾಲೇಜು ,ರಾಜನಹಳ್ಳಿ ಸೀತಮ್ಮ ಬಾಲಕಿಯರ ಶಾಲೆ ಮತ್ತು ಪದವಿ ಪೂರ್ವ ಕಾಲೇಜು, ಎ.ಆರ್.ಜಿ ಪಿಯು, ಬಂಕಾಪುರ ನಂಜುಂಡಪ್ಪ ಹಿರಿಯ ಪ್ರಾಥಮಿಕ ಶಾಲೆ ಹೀಗೆ ಸರಕಾರಿ, ಅನುದಾನಿತ ಮತ್ತು  ಖಾಸಗಿ ಶಾಲಾ ಕಾಲೇಜುಗಳಲ್ಲಿ  ಹಾಗೂ ಸಾರ್ವಜನಿಕ ಸ್ಥಳಗಳಾದ ಮೈದಾನದಲ್ಲಿ, ಬಸಾಪುರ ಗ್ರಾಮದಲ್ಲಿ, ವಿವಿಧ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯಗಳ ನೇತಾಜಿಯವರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ  ಅತ್ಯಂತ ಸ್ಪೂರ್ತಿದಾಯಕವಾಗಿ ನಡೆಯಿತು. ವಿದ್ಯಾರ್ಥಿಗಳಲ್ಲಿ ಉನ್ನತ ನೀತಿ-ನೈತಿಕತೆ-ಸಂಸ್ಕೃತಿಯನ್ನು ಬೆಳೆಸುವುದು ಮತ್ತು ಒಳ್ಳೆಯ ಗುಣಗಳನ್ನು ಹೊಂದಿರುವ ನೇತಾಜಿ ಅವರ ವಿಚಾರಗಳನ್ನು, ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂಬ ಕೂಗು ಎಲ್ಲೆಡೆ ಸಾರಲಾಯಿತು.

ಪ್ರಸಕ್ತ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಣ ಖಾಸಗೀಕರಣ, ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ,  ಅತ್ಯಾಚಾರ ಪ್ರಕರಣಗಳು ಇವೆಲ್ಲವೂ ಕೊನೆಯಾಗಬೇಕು. ಸಾಮಾಜಿಕ ವಾತಾವರಣವು ಕೆಟ್ಟ ಕೆಟ್ಟ ಸಿನಿಮಾ, ಅಶ್ಲೀಲತೆ ಇವುಗಳಿಂದ ಇವತ್ತಿನ ವಿದ್ಯಾರ್ಥಿಗಳ ಮನಸ್ಸು ಹಾಳಾಗುತ್ತಿದೆ ಹಾಗೂ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಆದ್ದರಿಂದ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ವಿದ್ಯಾರ್ಥಿಗಳಲ್ಲಿ ಶಿಕ್ಷಣ – ಮಾನವತೆ – ಸಂಸ್ಕೃತಿ ಉಳಿಸಲು ಕರೆ ಕೊಡಲಾಯಿತು.

ಈ ಸಂದರ್ಭದಲ್ಲಿ  ಮುಖ್ಯೋಪಾಧ್ಯಾಯರು, ಶಿಕ್ಷಕರು, ಪೋಷಕರು, ನೂರಾರು  ಸಂಖ್ಯೆಯಲ್ಲಿ ವಿದ್ಯಾರ್ಥಿಗಳು  ನೇತಾಜಿ ಅವರಿಗೆ  ತಮ್ಮ ನಮನಗಳನ್ನು ಸಲ್ಲಿಸುತ್ತಾ, ಈ ಘೋಷಣೆಗಳ ಜೊತೆಗೆ ನಿಂತರು.

error: Content is protected !!