ದಾವಣಗೆರೆ, ಜ.22- ನಗರದ ಬಾಡ ಕ್ರಾಸ್ ಬಳಿಯ ಶ್ರೀ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಬುಧವಾರ ಟಿ.ಆರ್. ಶಂಕರಪ್ಪ ಅವರ 75ನೇ ವರ್ಷದ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು.
ಆಶ್ರಮದ ಕಾರ್ಯದರ್ಶಿ ಕರಿಬಸಪ್ಪನವರು ಶಂಕರಪ್ಪ ಅವರಿಗೆ ಶುಭ ಹಾರೈಸಿ, ಆಶ್ರಮದ ವತಿಯಿಂದ ಸನ್ಮಾನಿಸಿದರು.
ಈ ವೇಳೆ ಸಿಂಗಪುರದ ಪರಮೇಶ್ವರಪ್ಪ, ಕುರ್ಕಿ ಕೆ.ಜಿ. ಬಸವರಾಜ್, ತರಳಬಾಳು ಬಡಾವಣೆಯ ಎ.ಆರ್. ನಾಗರಾಜ್ ಇದ್ದರು.