ದಾವಣಗೆರೆ, ಜ. 22- ಸ್ನೇಹ ಮಹಿಳಾ ಬಳಗದ ವತಿಯಿಂದ ವಾರ್ಷಿಕೋತ್ಸವ ಮತ್ತು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಆಜೀವ ಗೌರವ ಅಧ್ಯಕ್ಷರಾದ ಮಂಜುಳಾ ನಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗೌರವ ಅಧ್ಯಕ್ಷರಾದ ಮಂಜುಳಾ ಬಸವಲಿಂಗಪ್ಪ ಹೊಸ ವರ್ಷದ ಹಾಗೂ ಮಕರ ಸಂಕ್ರಮಣದ ಬಗ್ಗೆ ಮಾತನಾಡಿದರು.
ಅಧ್ಯಕ್ಷರಾದ ಶೋಭಾ ರವಿ, ಕಾರ್ಯದರ್ಶಿ ನಾಗರತ್ನ ಮಹೇಶ್, ಖಜಾಂಚಿ ತುಳಸಿ ಡಾ. ಮಹೇಶ್ ಹಾಗೂ ಸದಸ್ಯರಾದ ರೇಖಾ ಸುದರ್ಶನ್, ನರ್ಮದಾ, ಉಮಾ ಎಸ್. ಮೂರ್ತಿ, ರಾಜೇಶ್ವರಿ ಏಕಬೋಟೆ, ಚೇತನ ಲಿಂಗರಾಜು, ನೇತ್ರ ವೆರ್ಣೇಕರ್, ಅನ್ನಪೂರ್ಣ ಮಹೇಂದ್ರಕರ್, ಲೀಲಾ, ಮಮತಾ, ಕವಿತಾ ಜೈನ್, ಸುಜಾತ ಮತ್ತು ಅನೇಕ ಮಹಿಳೆಯರು ಭಾಗವಹಿಸಿದ್ದರು. ಸದಸ್ಯರು ಸಂಕ್ರಾಂತಿ ನೃತ್ಯ, ಹಾಡುಗಳು ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.