ಮಲೇಬೆನ್ನೂರು, ಜ. 22- ಕೆಂಚನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 11 ಜನ ನಿರ್ದೇಶಕರು ಚುನಾವಣೆಯಲ್ಲಿ ಮತ್ತು ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಲಗಾರರ ಕ್ಷೇತ್ರದಿಂದ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರೂ ಆದ ಕೆ.ಹೆಚ್. ಮಹೇಶ್ ಮತ್ತು ಕೆ.ಜಿ. ರೇವಣಸಿದ್ದಪ್ಪ, ಬುಳ್ಳಾಪುರದ ಎಂ.ಬಿ. ಶಿವಶಂಕರ್, ಟಿ.ಎಸ್. ಹನುಮಂತಪ್ಪ, ಬಿ.ಆರ್. ಪ್ರಭು, ಕುರುಬರಹಳ್ಳಿಯ ಸಿದ್ದಮ್ಮ, ಡಿ. ನಿಂಗಪ್ಪ, ಕೆಂಚನಹಳ್ಳಿಯ ಎ.ಕೆ. ದಂಡ್ಯಪ್ಪ, ಮೀನಾಕ್ಷಮ್ಮ, ರುದ್ರಮ್ಮ, ವಟ್ಟಗಾನಹಳ್ಳಿಯ ವಸಂತಕುಮಾರ್ ಇವರುಗಳು, ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಿಂದ ಕೆಂಚನಹಳ್ಳಿಯ ಇಂಧೂದರ್ ನಿಟುವಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.