ಹರಿಹರ, ಜ. 22 – ಅಯೋಧ್ಯೆ ನಗರದ ಶ್ರೀ ರಾಮ ಮಂದಿರದ ದೇವಸ್ಥಾನದಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಇಂದಿಗೆ ಒಂದು ವರ್ಷ ಕಳೆದಿರುವುದರಿಂದ ನಗರದ ಶ್ರೀರಾಮನ ಭಾವಚಿತ್ರದ ಮೆರವಣಿಗೆ ಯನ್ನು ಶ್ರದ್ಧಾ ಭಕ್ತಿಯಿಂದ ಮತ್ತು ಸಡಗರ, ಸಂಭ್ರಮದಿಂದ ಮಾಡಲಾಯಿತು.
ಮೆರವಣಿಗೆಯು ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡು, ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ, ಹಳೆ ಪಿ.ಬಿ. ರಸ್ತೆ, ಹೆಚ್. ಶಿವಪ್ಪ ಸರ್ಕಲ್, ಶಿವಮೊಗ್ಗ ರಸ್ತೆ, ಹೈಸ್ಕೂಲ್ ಬಡಾವಣೆಯ ಸೇರಿದಂತೆ ಇತರೆ ಪ್ರಮುಖ ಬಡಾವಣೆಯ ಸಂಚಾರಿ ರಾಮ ಮಂದಿರಕ್ಕೆ ಅಂತ್ಯಗೊಂಡಿತು.
ಸೀತಾರಾಮ ಭಜನಾ ಮಂಡಳಿ, ರಾಣಿ ಚೆನ್ನಮ್ಮ, ವಾಸವಿ, ದಾನಮ್ಮ ದೇವಿ, ಸತ್ಯಗಣಪತಿ, ರುಕ್ಮಿಣಿ, ದೈವಜ್ಞ, ಎಸ್, ಎಸ್.ಕೆ, ಸ್ವಕುಳ ಸಾಲಿ, ಜನಬಾಯಿ ಭಜನಾ ಮಂಡಳಿ ಸೇರಿದಂತೆ ಹಲವು ಮಹಿಳಾ ಭಜನಾ ಮಂಡಳಿಯ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆಗೆ ಮೆರಗನ್ನು ನೀಡಿದವು.
ಮೆರವಣಿಗೆ ನಂತರ ಶ್ರೀರಾಮ ಸೀತಾಮಾತೆ, ಲಕ್ಷ್ಮಣ, ಆಂಜನೇಯ ಸ್ವಾಮಿ ದೇವರಿಗೆ ಮಹಾಮಂಗಳಾರತಿ ಮಾಡಿ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಪೋವನ ಛೇರ್ಮನ್ ಶಶಿಕುಮಾರ್, ಬಿ.ಜೆ.ಪಿ. ಮುಖಂಡ ಚಂದ್ರಶೇಖರ್ ಪೂಜಾರ್, ಪರುಶುರಾಮ್ ಕಾಟ್ವೆ, ಶಶಿಕಾಂತ್ ನವರತ್ನ, ತುಳಜಪ್ಪ ಭೂತೆ, ಡಾ. ಸಿಂದಗಿ, ದಿನೇಶ್, ಕೃಷ್ಣಮೂರ್ತಿ ಶೆಟ್ಟಿ, ಶಿವಪ್ರಕಾಶ್ ಶಾಸ್ತ್ರಿ, ತುಳಜಪ್ಪ ಭೂತೆ, ಪವನ್ ಆಚಾರ್ಯ, ಮೈಲಾರಸಾ ಹೆಚ್. ಕಾಟ್ವೆ, ಗುರುಬಸವರಾಜ್, ಕೃಷ್ಣ ರಾಜೋಳ್ಳಿ, ಗಣೇಶ ನಲ್ಲಿ, ರಾಜು ಕಿರೋಜಿ, ರವಿಕುಮಾರ್, ಆದಿತ್ಯ ಟಿ. ಮೆಹರ್ವಾಡೆ, ಏಳುಕೋಟಿ ಹೆಚ್. ಕಾಟ್ವೆ, ರೂಪ ಶಶಿಕಾಂತ್, ಪ್ರೀಯಾ ರಾಯ್ಕರ್, ಸುಮಂತ್ ಖಮಿತ್ಕರ್, ಚಂದ್ರಲೇಖ ಮಲ್ಲಿಕಾರ್ಜುನ, ಗೀತಾ, ಗೀತಾ ಭೂತೆ, ಜಯಲಕ್ಷ್ಮಿ ಶಶಿಕುಮಾರ್ ಮೆಹರ್ವಾಡೆ, ಶಂಕುತಲ, ವಾಸವಿ, ಸಾಕ್ಷಿ, ನಂದಾ ಎಂ. ಕಾಟ್ವೆ , ಶೋಭಾ,ರತ್ನಮ್ಮ, ಜಾನಕಿ, ವೀಣಾ ಮಂಜುಳಾ, ಮುಕ್ತ ಬೊಂಗಾಳೆ, ಭಾರತಿ ನವಾಲೆ, ಇಂದ್ರಾಣಿ, ಅರುಣಾ ಬೊಂಗಾಳೆ ಟಿ. ಯಶೋಧ, ಚಿದಾನಂದ, ಸಿ.ಕೆ. ಗುರುಪ್ರಾಸದ್ ಕಂಚಿಕೇರಿ ಇತರರು ಹಾಜರಿದ್ದರು.