ಯುವಕರಿಗೆ ಸ್ವಾಮಿ ವಿವೇಕಾನಂದ ಮಾದರಿಯಾಗಲಿ

ಯುವಕರಿಗೆ ಸ್ವಾಮಿ ವಿವೇಕಾನಂದ ಮಾದರಿಯಾಗಲಿ

ಮೇಯರ್‌ ಕೆ. ಚಮನ್‌ಸಾಬ್‌ ಕಿವಿ ಮಾತು

ದಾವಣಗೆರೆ, ಜ.22- ಸಿನಿಮಾ ನಟರು, ಕ್ರಿಕೆಟ್‌ ಆಟಗಾರರನ್ನು ಮಾದರಿ ವ್ಯಕ್ತಿಯಾಗಿ ಸ್ವೀಕರಿಸದೇ ಸ್ವಾಮಿ ವಿವೇಕಾನಂದ ಅವರಂತಹ ಸಂತರನ್ನು ಮಾದರಿಯಾಗಿ ಸ್ವೀಕರಿಸಿ ಎಂದು ಯುವಕರಿಗೆ ಪಾಲಿಕೆ ಮೇಯರ್‌ ಕೆ. ಚಮನ್‌ಸಾಬ್‌ ಕಿವಿ ಮಾತು ಹೇಳಿದರು.

ನಗರದ ಬಸಾಪುರದಲ್ಲಿನ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಬಹಳ ಮುಖ್ಯ. ನಮ್ಮ  ಮಕ್ಕಳು ಇಂಜಿನಿಯರ್‌, ಡಾಕ್ಟರ್‌ ಆಗಬೇಕು ಎಂದು ಮಕ್ಕಳಲ್ಲಿ ಒತ್ತಡ ಹೇರದೆ, ಮಕ್ಕಳ ಆಸಕ್ತಿಯ ಅನುಗುಣವಾಗಿ ಪಾಲಕರು ಶಿಕ್ಷಣ ನೀಡಲು ಮುಂದಾಗಬೇಕು ಎಂದರು.

ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಮಾತನಾಡಿ, ಒಂದು ಶಾಲಾ ವಾತಾವರಣ ಹೇಗಿರಬೇಕು ಅನ್ನುವುದಕ್ಕೆ ನಮ್ಮ ಬಸಾಪುರದ ಸರ್ಕಾರಿ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆ ಮಾದರಿ ಆಗಬಹುದು. ಇಲ್ಲಿ ಗ್ರಾಮಸ್ಥರು ಹಾಗೂ ಶಿಕ್ಷಕ ವರ್ಗ ಒಟ್ಟಾಗಿ ಕಾರ್ಯ ನಿರ್ವಹಿಸುವುದರಿಂದ ಜನಪ್ರತಿನಿಧಿಗಳ ನೆರವು ಪಡೆದು ಶಾಲೆಯನ್ನು ಸುಸಜ್ಜಿತಗೊಳಿಸಿದ್ದಾರೆ ಎಂದರು.

ಜಿಲ್ಲೆಯ ಸುಮಾರು ಎಂಟನೂರು ಮಕ್ಕಳು ಪ್ರದರ್ಶನದಲ್ಲಿ ಭಾಗವಹಿಸಿ ನೃತ್ಯ, ಸಂಗೀತ, ಜಾನಪದ, ಪ್ರಬಂಧ ಮುಂತಾದ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು.

ವೈಯಕ್ತಿ ಹಾಗೂ ಸಾಮೂಹಿಕ ಸ್ಪರ್ಧೆಗಳಾದ ಕಂಠಪಾಠ, ಧಾರ್ಮಿಕ ಪಠಣ, ದೇಶಭಕ್ತಿ ಗೀತೆ, ಪ್ರಬಂಧ ರಚನೆ, ಕಥೆ ಹೇಳುವುದು, ಚಿತ್ರಕಲೆ, ಅಭಿನಯಗೀತೆ,  ಕ್ಲೇ ಮಾಡಲಿಂಗ್,  ಭಕ್ತಿಗೀತೆ, ಆಶುಭಾಷಣ, ಕವನ ವಾಚನ, ಮಿಮಿಕ್ರಿ, ರಂಗೋಲಿ, ಗಝಲ್, ಭರತನಾಟ್ಯ, ಭಾವಗೀತೆ, ಹೀಗೆ 14 ವೈಯಕ್ತಿಕ ಸ್ಪರ್ಧೆಗಳು ನಡೆದವು. ಜಾನಪದ ನೃತ್ಯ, ಕ್ವಿಜ್, ಕವ್ವಾಲಿ ಸಾಮೂಹಿಕ ಸ್ಪರ್ಧೆ ನಡೆದವು.

ಈ ವೇಳೆ ಡಿಡಿಪಿಐ ಕೊಟ್ರೇಶ್, ದಕ್ಷಿಣ ವಲಯ ಬಿಇಒ ಪುಷ್ಪಲತಾ, ಪಾಲಿಕೆ ಸದಸ್ಯೆ ಶಿವಲೀಲಾ ಕೊಟ್ರಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್, ಗುರುಸ್ವಾಮಿ, ಗ್ರಾಮದ ಪ್ರಮುಖರಾದ ಬಿ. ನಾಗೇಂದ್ರಚಾರ್, ಕೆ.ಬಿ. ಲಿಂಗರಾಜು, ಎಂ.ಎಸ್. ಕೊಟ್ರಯ್ಯ, ಸಿ.ಮಹೇಶ್ವರಪ್ಪ, ಕೆ.ಎಲ್. ಹರೀಶ್ ಬಸಾಪುರ, ಜಿ. ತಿಪ್ಪೇಸ್ವಾಮಿ, ಬಿ.ಎಂ. ಬಕ್ಕಯ್ಯ, ಬಿ.ಕೆ. ದೇವೇಂದ್ರಪ್ಪ, ಆಲದಹಳ್ಳಿ ಗಿರೀಶ್, ಕಳೂರು ಮಹೇಶ್ವರಪ್ಪ, ಕಳೂರು ಪರಮೇಶ್ವರಪ್ಪ ಇತರರಿದ್ದರು.

error: Content is protected !!