ಸ್ವಕುಳಸಾಳಿ ಶ್ರೀ ಜಿಹ್ವೇಶ್ವರ ಮಂದಿರದಲ್ಲಿ ನಾಳೆ ಶ್ರೀ ರಾಮನ ಪೂಜೆ

ಸ್ವಕುಳಸಾಳಿ  ಶ್ರೀ ಜಿಹ್ವೇಶ್ವರ ಮಂದಿರದಲ್ಲಿ ನಾಳೆ ಶ್ರೀ ರಾಮನ ಪೂಜೆ

ದಾವಣಗೆರೆ, ಜ. 20- ಹೊಂಡದ ಸರ್ಕಲ್‌ನಲ್ಲಿನ ಸ್ವಕುಳಸಾಳಿ ಸಮಾಜದ ಜಿಹ್ವೇಶ್ವರ ಮಂದಿರದಲ್ಲಿ ಅಯೋಧ್ಯ ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಾಡಿದ್ದು ದಿನಾಂಕ 22ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ರಾಮನ ಪೂಜೆ ನಡೆಸಲಾಗುವುದು.

ಈ ವರ್ಷ ಮಹಿಳಾ ಮಂಡಲದ ವತಿಯಿಂದ ಸಮಾಜದ ಮನೆಯಲ್ಲಿ ಶ್ರೀ ರಾಮನ ಪೂಜೆ ನಡೆಯಲಿದೆ. ಮೊದಲಿಗೆ ಶ್ರೀ ರಾಮನ ನಾಮಜಪ, ಶ್ರೀ ರಾಮನ ಅಷ್ಟೋತ್ತರ ನಾಮಾವಳಿ, ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ.  ಈ ಎಲ್ಲಾ ಕಾರ್ಯಕ್ರಮ ಗಳಲ್ಲೂ ಸಮಾಜ ಬಂಧುಗಳು,  ಹಿರಿಯರು, ಮಹಿಳಾ ಮಂಡಳದ ಎಲ್ಲಾ ಪದಾಧಿಕಾರಿಗಳು ಮತ್ತು ಎಲ್ಲ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ರಾಮನ ಆಶೀರ್ವಾದ ಪಡೆದುಕೊಳ್ಳಬಹುದಾಗಿದೆ.

error: Content is protected !!