ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಇಂದು `ಮುದುಕನ ಮದುವೆ’ ನಾಟಕ ಉಚಿತ ಪ್ರದರ್ಶನ ನಡೆಯಲಿದೆ.
ಪದ್ಮಶ್ರೀ ಚಿಂದೋಡಿ ಲೀಲಾ ಟ್ರಸ್ಟ್, ಶಿವಸಿಂಪಿ ಸಮಾಜ ದಾವಣಗೆರೆ ಇವರ ಸಹಯೋಗ ದಲ್ಲಿ ಪದ್ಮಶ್ರೀ ಚಿಂದೋಡಿ ಲೀಲಾ ರವರ 15ನೇ ವರ್ಷದ ರಂಗಸ್ಮರಣೆ ಹಾಗೂ ರಂಗಭೂಮಿ ಕಲಾವಿದರ ಸಮ್ಮಿಲನ ಕಾರ್ಯಕ್ರಮದಲ್ಲಿ ಸಂಜೆ 4.30ಕ್ಕೆ ನಡೆಯುವ ನಾಟಕ ಪ್ರದರ್ಶನದ ಮುಖ್ಯ ಹಾಸ್ಯ ಪಾತ್ರದಲ್ಲಿ ಚಿಂದೋಡಿ ಎಲ್. ಚಂದ್ರಧರ್ ನಟಿಸಲಿದ್ದಾರೆ.