ದಾವಣಗೆರೆ, ಜ.20- ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆ ಸಂಬಂಧ ಚುನಾವಣಾ ಅಖಾಡಕ್ಕೆ ನಾವೂ ಸಿದ್ಧರಿದ್ದೇವೆ. ತಾಕತ್ತಿದ್ದರೆ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸ್ಪರ್ಧೆ ಮಾಡಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿ.ಎಸ್.ಯಡಿಯೂರಪ್ಪ ಅವರ ಕೈಕಾಲು ಹಿಡಿದು ಪಕ್ಷಕ್ಕೆ ಬಂದಿರುವ ನೀನು (ಯತ್ನಾಳ) ನನಗೆ ಲೆಕ್ಕವೇ ಅಲ್ಲ. ನೀನು ಒಂದು ಹೆಜ್ಜೆ ಮುಂದಿಟ್ಟರೆ, ನಾನು 10 ಹೆಜ್ಜೆ ಮುಂದಿಡುತ್ತೇನೆ’ ಎಂದು ಏಕವಚನದಲ್ಲಿ ಟೀಕಿಸಿದರು.
ಅಲ್ಲಿರುವುದೇ (ಯತ್ನಾಳ ಬಣ) ಮೂರು ಮತ್ತೊಂದು. ಅವರೆಲ್ಲ ಕೆಲಸಕ್ಕೆ ಬಾರದವರು. ರಮೇಶ್ ಜಾರಕಿಹೊಳಿ ಅವರನ್ನೂ ಯತ್ನಾಳ ಕೆಡಿಸುತ್ತಿದ್ದಾರೆ ಎಂದು ದೂರಿದರು.
ರಾಜು ವೀರಣ್ಣ, ಪ್ರವೀಣ್ ಜಾಧವ್, ಪಿ.ಪಂಜು ಪೈಲ್ವಾನ್, ಚೇತನ್, ಅಜಯ್, ದಯಾನಂದ್ , ಶಿವಕುಮಾರ್ ಎಣ್ಣೇರ್, ಚಂದ್ರು ಪಾಟೀಲ್, ಸುಮಂತ್ ಈ ಸಂದರ್ಭದಲ್ಲಿದ್ದರು.