ನಗರದ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್‌ನ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಬೆಳಿಗ್ಗೆ 11 ಕ್ಕೆ ಹೊಸ ಕೋರ್ಟ್ ಪಕ್ಕ, ಎಸ್.ಎಸ್. ಉದ್ಯಾನವನದ ಹತ್ತಿರ ಜ್ಞಾನದಾಸೋಹಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 6ನೇ ವರ್ಷದ ಪುಣ್ಯಸ್ಮರಣೆ ಹಾಗು ಪೂಜ್ಯರ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಮತ್ತು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ಉಮೇಶ್, ಪದ್ಮಶಾಲಿ ಸಮಾಜದ ಅಧ್ಯಕ್ಷ ಬೊಮ್ಮ ತಿಪ್ಪೇಶ್, ಕೆ.ಎಸ್. ಮಲ್ಲೇಶಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಉಮೇಶಣ್ಣ, ಕರೂರು ಷಣ್ಮುಖ, ಮಂಜುನಾಥ್ ಕಂಬಳಿ, ಸಮಾಜ ಸೇವಕ ಕೆ.ಎಂ. ವೀರಯ್ಯ, ಜಯಂತ್, ಗಂಗಾಧರ, ನಟರಾಜ್, ವಿಜಯ್‌ಕುಮಾರ್, ಬಡಾವಣೆ ಕಾರ್ಯಕರ್ತರು ಆಗಮಿಸಲಿದ್ದಾರೆ. ಪೂಜೆ ನಂತರ ಪ್ರಸಾದದ ವಿತರಣೆ ಇರುತ್ತದೆ.