ಎಸ್‌ಎಲ್‌ಎನ್ ಕಾನ್ವೆಂಟ್‌ ಶಾಲೆಯಲ್ಲಿ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ

ಎಸ್‌ಎಲ್‌ಎನ್ ಕಾನ್ವೆಂಟ್‌ ಶಾಲೆಯಲ್ಲಿ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ

ದಾವಣಗೆರೆ, ಜ. 19- ನಗರದ ಸಿದ್ದವೀರಪ್ಪ ಬಡಾವಣೆಯ ಎಸ್ಎಲ್‌ಎನ್ ಕಾನ್ವೆಂಟ್‌ನ 26ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹಿರೇಮಠದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಲ್ಲಮ್ಮ ಆರ್. ಚೌಬೆ, ಶ್ರೀಮತಿ ಪ್ರಸನ್ನ ಬಿ., ಶ್ರೀಮತಿ ರೂಪಶ್ರೀ ಆಗಮಿಸಿದ್ದರು. ಸುಜಾತ ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಾಲೆಯ ನಿರ್ದೇಶಕ ಸುರೇಶ್ ಬಿ. ಕುಂಟೆ ಮಕ್ಕಳಿಗೆ ಬಹುಮಾನ ವಿತರಿಸಿದರು. ನಾಗೇಶ್ ಮೀರಜ್‌ಕರ್ ಸ್ವಾಗತಿಸಿದರು. ಶ್ರೀಮತಿ ಶಾಂತಾ ಮತ್ತು ಗೀತಾ ಪ್ರಾರ್ಥಿಸಿದರು. ಶ್ರೀಮತಿ ವಿಜಯ ವೀರೇಂದ್ರ ಕಾರ್ಯಕ್ರನ ನಿರೂಪಿಸಿದರು. ಶ್ರೀಮತಿ ಲಕ್ಷ್ಮಿ ಸುಮಂತ್ ಶಾಲಾ ವಾರ್ಷಿಕ ವರದಿ ಹಾಗೂ ಅತಿಥಿಗಳನ್ನು ಪರಿಚಯಿಸಿದರು.

2023-24ನೇ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಡಿಂಪನ ಆರ್.ಪಿ., ಗ್ರೀಷ್ಮ ಆರ್., ಅದ್ವಿತ ಪ್ರಭು ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿಜೇತರಾದ ಆರ್. ಗ್ರೀಷ್ಮ, ಕೆ.ಪಿ. ಪ್ರತೀಕ್ಷ, ಎಸ್. ಕೀರ್ತನ, ಕಬೀರ್ ಜಿದಾನ್ ಅದ್ವಾನಿ, ಹರ್ಷಿತಾ, ಯು.ಜೆ. ಚೇತನ್ ಅವರುಗಳಿಗೆ ಬಹುಮಾನ ವಿತರಿಸಲಾಯಿತು.

error: Content is protected !!