ಹೊಸ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಎಂಟ್ರಿ

ಹೊಸ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಎಂಟ್ರಿ

ದಾವಣಗೆರೆ, ಜ.19- ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ಬಹು ನಿರೀಕ್ಷಿತ ಹೊಸ ಹುಂಡೈ ಎಲೆಕ್ಟ್ರಿಕ್ ಕ್ರೆಟಾ ಕಾರನ್ನು ನಗರದ ಕೆ.ಜೆ. ಹುಂಡೈ ಶೋ ರೂಂ ನಲ್ಲಿ ಆರ್.ಟಿ.ಓ. ಅಧಿಕಾರಿ ಸಿ.ಎಸ್. ಪ್ರಮೂತೇಶ್ ಅವರು ಮಾರುಕಟ್ಟೆಗೆ ಪರಿಚಯಿಸಿದರು.

ಹೊಸ ಹುಂಡೈ ಕ್ರೆಟಾ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೆ.ಜೆ. ಹುಂಡೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಜೆ.ಅಫಕ್ ರಜ್ವಿ ಅವರು, ಹುಂಡೈ ಎಲೆಕ್ಟ್ರಿಕ್ ಕ್ರೆಟಾ ಬ್ರ್ಯಾಂಡ್‍ನ ಯಶಸ್ಸು ಮತ್ತು ಪರಂಪರೆಯ ಮೇಲೆ ಹೊಸ ವಾಹನನ್ನು ಉತ್ಪಾದಿಸಲಾಗಿದೆ ಎಂದು ತಿಳಿಸಿದರು.

ಹುಂಡೈ ಜನಪ್ರಿಯ ಎಸ್‍ಯುವಿಗಳಲ್ಲಿ ಎಲೆಕ್ಟ್ರಿಕ್ ಕ್ರೆಟಾ ಕೂಡ ಒಂದು. 4,330 ಎಂಎಂ ಉದ್ದ, 1,790 ಎಂಎಂ ಅಗಲ ಮತ್ತು 1,635 ಎಂಎಂ ಎತ್ತರವನ್ನು ಹೊಸ ಹುಂಡೈ ಎಲೆಕ್ಟ್ರಿಕ್ ಕ್ರೆಟಾ ಹೊಂದಿದೆ. ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವಿಹಂಗಮ ಸನ್‍ರೂಫ್, ವೆಂಟಿಲೇಟೆಡ್ ಸೀಟ್‍ಗಳು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‍ಗಳು, ಮಲ್ಟಿ ಕಲರ್ ಅಂಬಿಯೆಂಟ್ ಲೈಟಿಂಗ್, ಆಪಲ್ ಕಾರ್ ಪ್ಲೇ/ಅಂಡ್ರ್ಯಾಯ್ಡ್ ಆಟೋ, ಕನೆಕ್ಟೆಡ್ ಕಾರ್‍ಟೆಕ್, ವಾಯ್ಸ್ ಕಮಾಂಡ್‍ಗಳು ಸೇರಿ ಸಾಕಷ್ಟು ವೈಶಿಷ್ಟ್ಯಗಳನ್ನು ಇದು ಹೊಂದಿದೆ. 

ಇನ್ನೂ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆರು ಏರ್‍ಬ್ಯಾಗ್‍ಗಳು, 360 ಡಿಗ್ರಿ ಕ್ಯಾಮೆರಾ,
ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಇದು ಹೊಂದಿದೆ. ಆರಂಭಿಕ ಎಕ್ಸ್ ಶೋರೂಂ ಬೆಲೆ ರೂ. 17.99 ಲಕ್ಷದಿಂದ ಪ್ರಾರಂಭಗೊಂಡು ರೂ.24.00 ಲಕ್ಷದವರೆಗೆ ಅಂತ್ಯಗೊಳ್ಳುತ್ತದೆ. (ಚಾರ್ಜರ್‍ನೊಂದಿಗೆ)

ಸಮಾರಂಭದಲ್ಲಿ ಕೆ.ಜೆ.ಹುಂಡೈ ಸಂಸ್ಥೆಯ ಅಧ್ಯಕ್ಷರಾದ ಕೆ.ಜಾವೀದ್ ಸಾಬ್, ವ್ಯವಸ್ಥಾಪಕ ನಿರ್ದೇಶಕರಾದ ಕೆ.ಜೆ.ಅಫಕ್ ರಜ್ವಿ, ಸಂಸ್ಥೆಯ ನಿರ್ದೇಶ ಕರಾದ ಕೆ.ಜೆ.ಅಬ್ರಾರ್, ವ್ಯವಸ್ಥಾಪಕರಾದ ಶ್ರೀಮತಿ ಅಂಜಲಿ, ಮ್ಯಾನೇಜರ್ ಹಂಜಲ್, ಸೇಲ್ಸ್ ಎಕ್ಸಕ್ಯೂ ಟೀವ್ ಮಧುಸೂದನ್ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕ ಗ್ರಾಹಕರು ಉಪಸ್ಥಿತರಿದ್ದರು. 

error: Content is protected !!