ಕೈದಾಳೆ- ಗಿರಿಯಾಪುರ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಸಚಿವರು, ಸಂಸದರಿಗೆ ಗ್ರಾಮಸ್ಥರ ಅಭಿನಂದನೆ

ಕೈದಾಳೆ- ಗಿರಿಯಾಪುರ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಸಚಿವರು, ಸಂಸದರಿಗೆ ಗ್ರಾಮಸ್ಥರ  ಅಭಿನಂದನೆ

ದಾವಣಗೆರೆ, ಜ.17- ತಾಲ್ಲೂಕಿನ ಕೈದಾಳೆ ಹಾಗೂ ಗಿರಿಯಾಪುರ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಅನುಕೂಲಕ್ಕಾಗಿ‌ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಸೂಚನೆಯ ಮೇರೆಗೆ ಶಕ್ತಿ ಯೋಜನೆಯಡಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಸಂತಸಗೊಂಡ ಗ್ರಾಮಸ್ಥರು ಹಾಗೂ‌ ವಿದ್ಯಾರ್ಥಿಗಳು ಸಚಿವರು‌  ಹಾಗೂ‌ ಸಂಸದರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕ ಬಂಧುಗಳಿಗೆ ಅನುಕೂಲವಾಗುವಂತೆ ದಿನಕ್ಕೆ ಊರಿನೊಳಗೆ ಎರಡು ಸಾರಿ ಬೆಳಗ್ಗೆ ಮತ್ತು ಸಾಯಂಕಾಲ ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡಲಾಯಿತು. 

ಮಹಿಳೆಯರು, ವಿದ್ಯಾರ್ಥಿಗಳು ಕೈದಾಳೆ ಗ್ರಾಮಸ್ಥರು ಈ ಶಕ್ತಿ ಯೋಜನೆಗೆ ಸಹಕರಿಸಿದ ಸಾರಿಗೆ ಇಲಾಖೆ ಸಿಬ್ಬಂದಿ ವರ್ಗದವರಿಗೆ  ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ  ಗ್ಯಾರಂಟಿ ಯೋಜನೆಯ ಜಿಲ್ಲಾ ಸದಸ್ಯರಾದ ಕೈದಾಳೆ ಶಿವಶಂಕರ್  ಉಪಸ್ಥಿತರಿದ್ದರು.

error: Content is protected !!