ಜಗಳೂರಿನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಚಂದ್ರಶೇಖರ ತಾಳ್ಯ
ಜಗಳೂರು, ಜ.16- ಕವಿಗಳು ಸಮಾಜದ ಕುಂದುಕೊರತೆಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ಕವಿತೆಗಳನ್ನು ರಚಿಸಬೇಕು ಎಂದು ಸಾಹಿತಿ ಚಂದ್ರಶೇಖರ ತಾಳ್ಯ ಹೇಳಿದರು.
ಎರಡನೇ ದಿನದ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾಗರೂಕ ಬರವಣಿಗೆಯನ್ನು ಕವಿಗಳು ಮೈಗೂಡಿಸಿಕೊಳ್ಳಬೇಕಿದೆ. ಜಾತಿ ವ್ಯವಸ್ಥೆ ಬಿಗಿಯಾಗಿದ್ದು, ದೇಶದಲ್ಲಿ ಮರ್ಯಾದಾ ಹತ್ಯೆ, ಭ್ರೂಣ ಹತ್ಯೆಗಳು ನಡೆಯುತ್ತಿವೆ. ಇದರಿಂದ ಮನಸ್ಸುಗಳು ವಿಕಾರಗೊಳ್ಳುತ್ತಿವೆ ಎಂದರು.
ಲಿಂಗತಾರತಮ್ಯ, ಜಾತೀಯತೆ, ಕೋಮುವಾದ ಹರಡುವ ದೇಶದಲ್ಲಿ ಸಮುದಾಯ ದೃಷ್ಟಿಯಿಂದ ಕವಿತೆಗಳು ಹೆಚ್ಚು ಹೆಚ್ಚು ಹೊರಹೊಮ್ಮಬೇಕಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ 20ಕ್ಕೂ ಅಧಿಕ ಕವಿಗಳು ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಎ.ಬಿ. ರಾಮಚಂದ್ರಪ್ಪ, ಚುಟುಕು ಸಾಹಿತ್ಯದ ಜಿಲ್ಲಾಧ್ಯಕ್ಷ ರಾಜಶೇಖರ ಗುಂಡಗಟ್ಟಿ, ಕದಳಿ ಮಹಿಳಾ ವೇದಿಕೆ, ಸಿಡಿಪಿಓ ಮೇಲ್ವಿಚಾರಕಿ ಎಚ್.ವಿ ಶಾಂತಮ್ಮ ಇದ್ದರು.