ಕೆ.ಎನ್‌. ಹಳ್ಳಿ ಪಿಎಸಿಎಸ್‌ ಅಧ್ಯಕ್ಷರಾಗಿ ಶಾರದಮ್ಮ ಉಪಾಧ್ಯಕ್ಷರಾಗಿ ರಿಯಾಜ್‌ ಅಹಮದ್‌

ಕೆ.ಎನ್‌. ಹಳ್ಳಿ ಪಿಎಸಿಎಸ್‌ ಅಧ್ಯಕ್ಷರಾಗಿ ಶಾರದಮ್ಮ ಉಪಾಧ್ಯಕ್ಷರಾಗಿ ರಿಯಾಜ್‌ ಅಹಮದ್‌

ಮಲೇಬೆನ್ನೂರು, ಜ. 17 – ಕಡಾರನಾಯ್ಕನಹಳ್ಳಿ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗುಬ್ಬಿ ಶಾರದಮ್ಮ ಮತ್ತು ಉಪಾಧ್ಯಕ್ಷರಾಗಿ ರಿಯಾಜ್‌ ಅಹಮದ್‌ ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮದ ಮುಖಂಡರಾದ ಗುಬ್ಬಿ ರಂಗನಾಥ್‌ ಮತ್ತು ವಿ.ಕುಬೇಂದ್ರಪ್ಪ ಅವರ ನೇತೃತ್ವದಲ್ಲಿ ಈ ಆಯ್ಕೆ ನದೆದಿದ್ದು, ಸಂಘದ ಎಲ್ಲಾ ನೂತನ ನಿರ್ದೇಶಕರು ಅವಿರೋಧ ಆಯ್ಕೆಗೆ ಸಹಕರಿಸಿದರು. ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವೆಂಕಟೇಶ್ವರಾವ್‌ ಅವರು ಚುನಾವಣಾಧಿಕಾರಿಯಾಗಿದ್ದರು. ಸಂಘದ ಸಿಇಓ ಎನ್‌. ತಿಪ್ಪೇಶಿ ಸ್ವಾಗತಿಸಿ, ವಂದಿಸಿದರು.

error: Content is protected !!