ಮಲೇಬೆನ್ನೂರು, ಜ.17- ಕುಂಬಳೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬೀರದೇವರ ಹೊರಗುಡಿಯ ಉದ್ಘಾಟನಾ ಕಾರ್ಯಕ್ರಮ ಗಳು ನಾಳೆ ದಿನಾಂಕ 18ರ ಶನಿವಾರ ಮತ್ತು ದಿನಾಂಕ 19ರ ಭಾನುವಾರ ಜರುಗಲಿವೆ. ಶನಿವಾರ ಸಂಜೆ ಗ್ರಾಮದ ಎಲ್ಲಾ ದೇವತೆಗಳನ್ನು ಪರಸ್ಥಳ ಗೂಡು ಕಟ್ಟು ಬೀರದೇವರುಗಳ ಸಮ್ಮುಖದಲ್ಲಿ ಗಂಗೆ ಪೂಜೆ ನೆರವೇರಿಸಿದ ಬಳಿಕ ಬೀರದೇವರ ಹೊರಗುಡಿಗೆ ಎಲ್ಲಾ ದೇವರುಗಳನ್ನು ಕರೆ ತರಲಾಗುವುದು. ಭಾನುವಾರ ಬ್ರಾಹ್ಮೀ ಮುಹೂರ್ತದಲ್ಲಿ ಬೀರ ದೇವರಿಗೆ ಅಭಿಷೇಕ, ಹೋಮ, ಬಿಲ್ವಾರ್ಚನೆ ನಂತರ ಬೆಳಿಗ್ಗೆ 11 ರಿಂದ ದೊಡ್ಡ ಎಡೆ ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ 12.30 ರಿಂದ ಅನ್ನ ಸಂತರ್ಪಣೆ ನಡೆಯಲಿದೆ.
January 18, 2025