ದಾವಣಗೆರೆ, ಜ.21- ಬೆಂಗಳೂರಿನಲ್ಲಿರುವ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಚೇರಿಯನ್ನು ಕೂಡಲೇ ದಾವಣಗೆರೆಗೆ ಸ್ಥಳಾಂತರಿಸಿ, ಕಾರ್ಯಾರಂಭಿಸಬೇಕು ಎಂದು ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಷ್ಠಾನ ಹಾಗೂ ಜಿಲ್ಲಾ ಸಾರ್ವಜನಿಕರ ಹಿತರಕ್ಷಣಾ ಒಕ್ಕೂಟವು ಸರ್ಕಾರಕ್ಕೆ ಒತ್ತಾಯಿಸಿದೆ.
ರೈತಾಪಿ ವರ್ಗದವರಿಗೆ ಅನುಕೂಲವಾಗಲೆಂದು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಯಲ್ಲಿನ ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಂಗಳೂರು ಕಚೇರಿಯನ್ನು ಅಧಿಕಾರಿ ಹಾಗೂ ಸಿಬ್ಬಂದಿ ಸಹಿತ ಮಧ್ಯ ಕರ್ನಾಟಕದ ದಾವಣಗೆರೆಗೆ ಸ್ಥಳಾಂತರಿ ಸುವಂತೆ ಸರ್ಕಾರವೇ ಆದೇಶಿಸಿದರೂ ಇಂದಿಗೂ ಸ್ಥಳಾಂತರವಾಗಿಲ್ಲ.
ಆದೇಶ ಸಂಖ್ಯೆ : ಜಸಂಇ333 ಎಸ್ಎಎಸ್ 2021ರ ಪ್ರಕಾರ 2022ರ ಜೂನ್ 23ರಂದೇ ಸರ್ಕಾರ ಆದೇಶ ಹೊರಡಿಸಿದೆ. ಆದೇಶ ನೀಡಿ 4 ವರ್ಷಗಳೇ ಕಳೆದರೂ ಸ್ಥಳಾಂತರವಾಗದ ಬಗ್ಗೆ ಜಿಲ್ಲೆಯ ಜನರು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸುತ್ತಿದ್ದಾರೆ ಎಂದು ಒಕ್ಕೂಟ ಹೇಳಿದೆ.