ವಿವೇಕಾನಂದರ ಆದರ್ಶ ಮೈಗೂಡಿಸಿಕೊಂಡರೆ ಯಶಸ್ಸು ಸಾಧ್ಯ

ವಿವೇಕಾನಂದರ ಆದರ್ಶ  ಮೈಗೂಡಿಸಿಕೊಂಡರೆ ಯಶಸ್ಸು ಸಾಧ್ಯ

ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ  ಹರಪನಹಳ್ಳಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್

ಹರಪನಹಳ್ಳಿ, ಜ.15- ಸ್ವಾಮಿ ವಿವೇಕಾನಂದ ರವರು ಯುವ ಜನತೆಗೆ ಒಳ್ಳೆಯ ಸಂದೇಶ ನೀಡಿದ್ದಾರೆ. ಅವರ ಆದರ್ಶಗಳನ್ನು ಯುವಕರು ಮೈಗೂಡಿಸಿಕೊ ಳ್ಳಬೇಕೆಂದು ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್ ಹೇಳಿದರು.

ತಾಲ್ಲೂಕಿನ ಅರಸಿಕೇರಿ ಗ್ರಾಮ ದಲ್ಲಿರುವ ಶ್ರೀ ತೋಂಟದಾರ್ಯ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನವನ್ನು ಮುನ್ನಡೆಸಿದಾಗ ವಿದ್ಯಾರ್ಥಿ ಜೀವನ ನಡೆಸಲು ಸಾಧ್ಯ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಅನುಯಾಯಿಗಳಾಗಿ ನಡೆದುಕೊಂಡು ಹೋಗಬೇಕಾಗಿದೆ. ವಿದ್ಯಾರ್ಥಿಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಹ ಸೃಜನಶೀಲ ವಿದ್ಯಾರ್ಥಿಗಳಾಗಿ ನಿಮ್ಮ ತಂದೆ-ತಾಯಿಗೆ ಕ್ರಿಯಾಶೀಲ ಮಕ್ಕಳಾಗಿ ನಡೆದು ಕೊಳ್ಳಿ  ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ವಕೀಲ ಕೆ.ಎಂ.ಚಂದ್ರಮೌಳಿ ಮಾತನಾಡಿ, ವಿದ್ಯಾರ್ಥಿಗಳ ಜೀವನ ನಿಂತ ನೀರಾಗಿರಬಾರದು, ಹರಿಯುವ ನದಿಯಾಗಿ  ಜ್ಞಾನ ಸಂಪಾದನೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ಯಾನಲ್ ವಕೀಲ ಎಂ.ಮೃತ್ಯುಂಜ್ಯಯ ಮಾತನಾಡಿ, ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾದಾಗ ಮಾತ್ರ ಉತ್ತಮ ವಿದ್ಯಾರ್ಥಿಗಳಾಗಿ ನಡೆದು ಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಗುರಿ ಮುಟ್ಟುವ ತನಕ ನಿಮ್ಮ ಆದರ್ಶ ಜೀವನ ನಡೆಯಲಿ,  ಒಳ್ಳೆಯ ವಿದ್ಯಾರ್ಥಿಗಳಾಗಿ, ಕೆಟ್ಟ ವಿದ್ಯಾರ್ಥಿಗಳಾಗಬೇಡಿ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಹೊಸಕೋಟೆ ಸಿದ್ದೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದ ರವರು  ಅಮೇರಿಕಾದ ಚಿಕಾಗೋ ಸಮ್ಮೇಳ ನದಲ್ಲಿ ಸದೃಢವಾಗಿ ಮಾತನಾಡಿದ್ದರು. ಅವರ ಆದರ್ಶ ಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ವೈ.ಅಣ್ಣಪ್ಪ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಮಂಜುನಾಥ್ ಎಸ್.ಬಾಗಳಿ, ಕಾರ್ಯದರ್ಶಿ ನಂದಿಬೇವೂರು ಮಲ್ಲಪ್ಪ.ಎಂ. ಪುರಸಭೆ ಸದಸ್ಯ ಜಾಕಿರ್ ಹುಸೇನ್, ವಕೀಲರಾದ ಜೆ.ಸೀಮಾ  ,ಉಪನ್ಯಾಸಕರಾದ ಡಾ.ಹೆಚ್.ರಮೇಶ. ಪ್ರದೀಪ್,  ತಾಲ್ಲೂಕು ಕಾನೂನು ಸೇವಾ ಸಮಿತಿಯ ಸಿಬ್ಬಂದಿಗಳಾದ ಕೊಟ್ರೇಶ್, ಬಸವರಾಜ್ ಮತ್ತು ಇತರರು ಇದ್ದರು.

error: Content is protected !!