ಹಂಪಿ ದೇವಸ್ಥಾನದ ಆವರಣದಲ್ಲಿ ಬಾಳೆಹಣ್ಣು ನಿಷೇಧ

ಹಂಪಿ, ಜ.16- ಇಲ್ಲಿನ 7ನೇ ಶತಮಾನದ ಶಿವನ ದೇಗುಲದ ಆವರಣದೊಳಗೆ ಬಾಳೆಹಣ್ಣುಗಳನ್ನು ನಿಷೇಧಿಸಿದೆ. ದೇವಸ್ಥಾನ, ಆನೆ ಹಾಗೂ ಭಕ್ತರ ಹಿತದೃಷ್ಟಿಯಿಂದ ಬಾಳೆಹಣ್ಣಿಗೆ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ವಿರೂಪಾಕ್ಷ ದೇವಸ್ಥಾನದ ಆಡಳಿತ ಮಂಡಳಿ ಗುರುವಾರ ತಿಳಿಸಿದೆ.

ಭಕ್ತರು ದೇವಾಲಯದ ಆನೆಗೆ ಅತಿಯಾಗಿ ಬಾಳೆ ಹಣ್ಣು ತಿನ್ನಿಸುತ್ತಿದ್ದಾರೆ. ಇದು ಆನೆಗೆ ಹಾನಿಕಾರಕ ಮಾತ್ರ ವಲ್ಲ, ಇದು ಸ್ಥಳವನ್ನು ತುಂಬಾ ಕೊಳಕು ಮಾಡುತ್ತದೆ. ಭಕ್ತರು ಬಾಳೆಹಣ್ಣಿನ ಸಿಪ್ಪೆಗಳು ಮತ್ತು ಅವರು ಬಾಳೆಹಣ್ಣುಗಳನ್ನು ತಂದ ಪ್ಲಾಸ್ಟಿಕ್ ಚೀಲಗಳನ್ನು ಸಹ ಇಲ್ಲಿಯೇ ಬಿಡುತ್ತಾರೆ’ ಎಂದು ದೇವಸ್ಥಾನದ ದತ್ತಿ ಅಧಿಕಾರಿ ಹನುಮಂತಪ್ಪ  ಹೇಳಿದ್ದಾರೆ.

ಬಾಳೆಹಣ್ಣನ್ನು ನಿಷೇಧಿಸಿರುವ ಕುರಿತು ವರದಿಗಳು ಹೊರಬಂದಾಗಿನಿಂದ, ಈ ಬಗ್ಗೆ ಕೇಳಲು ಸಾಕಷ್ಟು ಕರೆಗಳು ಬರುತ್ತಿವೆ. ಬಾಳೆಹಣ್ಣು ನಿಷೇಧವನ್ನು ನಿಮ್ಮ ಸಂದರ್ಭಕ್ಕೆ ತಕ್ಕಂತೆ ತೆಗೆದುಕೊಂಡು ವಿವಾದ ಮಾಡಬೇಡಿ ಎಂದು ಹನುಮಂತಪ್ಪ ಮನವಿ ಮಾಡಿದರು. ಇದು ಸ್ಥಳೀಯ ವಿಷಯವಾಗಿದ್ದು, ನಮ್ಮ ದೇವಸ್ಥಾನದ ಆವರಣದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹನುಮಂತಪ್ಪ ಹೇಳಿದ್ದಾರೆ.

error: Content is protected !!