ಹರಿಹರ, ಜ. 15 – ನಗರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಹರಜಾತ್ರೆ, ಕಿತ್ತೂರು ರಾಣಿ ಚೆನ್ನಮ್ಮ ದ್ವಿಶತಮಾನ ವಿಜಯೋತ್ಸವ ಮತ್ತು ವಚನಾನಂದ ಶ್ರೀಗಳ 7ನೇ ವರ್ಷದ ಪೀಠಾರೋಹಣ ಮಹೋತ್ಸವ ಕಾರ್ಯಕ್ರಮದಲ್ಲಿ ಬೇರೆ ಊರುಗಳಿಂದ ಆಗಮಿಸಿದ್ದ ಭಕ್ತರ ಮಧ್ಯ ಕ್ಷುಲ್ಲಕ ಕಾರಣಕ್ಕೆ ಒಬ್ಬರಿಗೊಬ್ಬರು ಗಲಾಟೆ ನಡೆದು ಒಬ್ಬ ವ್ಯಕ್ತಿ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವ ಆದ ಘಟನೆ ಮಂಗಳವಾರ ನಡೆದಿದೆ.
ಮಾಜಿ ಸಚಿವ ನಿರಾಣಿ ಅವರು, ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲರಿಗೆ ರಾಜ್ಯಾದ್ಯಂತ ಸಮಾಜ ಸಂಘಟನೆ ಮಾಡಲು ಹೊಸ ಕಾರು ನೀಡಿದ್ದಾರೆ ಎಂದು ರಾಣೇಬೆನ್ನೂರಿನ ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ವೇದಿಕೆಯಲ್ಲಿ ಘೋಷಿಸಿದರು.
ಈ ವಿಚಾರವಾಗಿ ವೇದಿಕೆಯ ಮುಂಭಾಗ ಕುಳಿತಿದ್ದ ಕೆಲವು ಭಕ್ತರ ಮಧ್ಯೆ ಮಾತಿನ ಸಮರ ಆರಂಭವಾಗಿ ಗಲಾಟೆ ಆರಂಭ ವಾಗಿದೆ. ತಕ್ಷಣ ವೇದಿಕೆಯ ಮೇಲಿದ್ದ ಸೋಮನಗೌಡ ಪಾಟೀಲರು ಗಲಾಟೆ ನಿಲ್ಲಿಸುವಂತೆ ಮೈಕ್ನಲ್ಲಿ ತಿಳಿಸಿದರೂ ಗಲಾಟೆ ಮತ್ತು ತೀವ್ರತೆಗೆ ಹೋದಾಗ ಪೆೊಲೀಸರು ಮಧ್ಯೆ ಪ್ರವೇಶಿಸಿ ಗಲಾಟೆ ಮಾಡುವವರನ್ನು ಮಠದಿಂದ ಹೊರಕ್ಕೆ ಕಳಿಸಿದ್ದಾರೆ.
ಈ ಗಲಾಟೆ ಮದ್ಯ ಒಬ್ಬ ವ್ಯಕ್ತಿಗೆ ತೀವ್ರವಾಗಿ ಪೆಟ್ಟು ಬಿದ್ದು ರಕ್ತಸ್ರಾವ ಆಗುತ್ತಿದ್ದದನ್ನು ನೆರೆದಿದ್ದ ಜನರು ನೋಡಿ ಯಾರು ಹೊಡೆದರು ಎಂದು ಕೇಳಿದರು. ಆ ವ್ಯಕ್ತಿ ಗಲಾಟೆ ಮಧ್ಯೆ ಯಾರು ಹೊಡೆದಿದ್ದಾರೆ ಎಂಬುದೇ ಗೊತ್ತಾಗಿಲ್ಲಿಲ್ಲ ಸಭೀಕರಿಗೆ ತಿಳಿಸಿದ್ದಾನೆ. ತಲೆಯಿಂದ ರಕ್ತಸ್ರಾವ ಆಗಿ ಮುಖದ ಮೇಲೆ ಮತ್ತು ಬಟ್ಟೆಗಳೆಲ್ಲ ರಕ್ತ ವಾಗಿರುವುದನ್ನು ಕಂಡ ಮಠದ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್ ವಿಚಾರಿಸಿದ್ದಾರೆ. ತಕ್ಷಣ ಪೆಟ್ಟು ಬಿದ್ದ ವ್ಯಕ್ತಿಯ ತಲೆಗೆ ಬಟ್ಟೆ ಕಟ್ಟಿ ಆಸ್ಪತ್ರೆಗೆ ತೆರಳುವಂತೆ ಸೂಚನೆ ನೀಡಿದ್ದಾರೆ.