ವಿಜೃಂಭಣೆಯ ಬನಶಂಕರಿ ದೇವಿ ಜಾತ್ರೆ

ದಾವಣಗೆರೆ,ಜ.15-  ನಗರದ ಡಿಸಿಎಂ ಲೇಔಟ್ ಹಿಂಭಾಗದ ರಾಜೇಂದ್ರ ಬಡಾವಣೆ ಶ್ರೀ ಬನಶಂಕರಿ ದೇವಿ ದೇವಸ್ಥಾನದಲ್ಲಿ 11ನೇ ವರ್ಷದ ಜಾತ್ರೋತ್ಸವವು ಮೂರು ದಿನಗಳ ಕಾಲ ವಿಜೃಂಭಣೆಯಿಂದ  ಜರುಗಿತು. ಬನಶಂಕರಿ ದೇವಸ್ಥಾನ ಸಮಿತಿ ಹಾಗೂ ಬನಶಂಕರಿ ಯುವಕರ ಸಂಘದ ವತಿಯಿಂದ ಬನದ ಹುಣ್ಣಿಮೆ ಪ್ರಯುಕ್ತ ಜಾತ್ರೆ ನಡೆಯಿತು. ನಂದಿ ಧ್ವಜಾರೋಹಣ, ಗಂಗಾ ಪೂಜೆ, ಶ್ರೀ ಶಾಖಾಂಬರಿ ವ್ರತ, ವಿಶೇಷ ತರಕಾರಿ ಅಲಂಕಾರ ನೆರವೇರಿತು. ವಿಶೇಷ ಅಲಂಕಾರ, ಅನ್ನ ಸಂತರ್ಪಣೆ ನಡೆಯಿತು. ನಂತರ ಶ್ರೀ ಬನಶಂಕರಿ ದೇವಿಯ ಮೆರವಣಿಗೆ ಜರುಗಿತು.

error: Content is protected !!