ದಾವಣಗೆರೆ, ಜ. 15- ವಿದ್ಯಾನಗರ ಇನ್ನರ್ವ್ಹೀಲ್ ಸಂಸ್ಥೆಯಿಂದ ಈಚೆಗೆ ಇನ್ನರ್ವ್ಹೀಲ್ ಡೇ ಆಚರಿಸಲಾಯಿತು.
ಶ್ರೀಮತಿ ಪ್ರೇಮಾ ಮಹೇಶ್ವರಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಜಿ ಅಧ್ಯಕ್ಷರಾದ ಸಾವಿತ್ರ ವೀರಣ್ಣ ಉಪಸ್ಥಿತರಿದ್ದು, ಇನ್ನರ್ವ್ಹೀಲ್ ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು. ಸಂಸ್ಥೆಯಲ್ಲಿ ಸ್ನೇಹ ಮತ್ತು ಸೇವೆಯೇ ಮುಖ್ಯ ಧ್ಯೇಯವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಗುರುತಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ಈ ಸಂಸ್ಥೆ ಉದ್ದೇಶವಾ ಗಿದೆ. ಇದರ ಪ್ರಯಕ್ತ ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಗುರುತಿಸಿ ಅವ ರಿಗೆ ಸ್ವಾವಲಂಬಿಯಾಗಲು ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು ಎಂದರು.
ಶ್ರೀಮತಿ ಸುಲೋಚನಾ ರಾಜಶೇಖರಪ್ಪ ಸಭೆ ಕುರಿತು ಹಿತವಚನ ನೀಡಿದರು. ಈ ಸಮಯದಲ್ಲಿ ಅವರು ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವು ದಕ್ಕಿಂತ ನಾವು ಸಮಾಜಕ್ಕೆ ಏನು ನೀಡಿದ್ದೇವೆ ಎಂಬುದು ಮುಖ್ಯವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು. ಭಾಗ್ಯ ವೀರಣ್ಣ ವಂದಿಸಿದರು.