ಶ್ರೀ ಶಿವಯೋಗೀಶ್ವರ ಭಜನಾ ಸಂಘದ ವತಿಯಿಂದ ಚೌಕಿಪೇಟೆಯ ಶ್ರೀ ಬಕ್ಕೇಶ್ವರ ಮಹಾಸ್ವಾಮಿ ದೇವ ಸ್ಥಾನದ ಆವರಣದಲ್ಲಿ ಪ್ರತಿದಿನ ಸಂಜೆ 6.30 ರಿಂದ ರಾತ್ರಿ 8 ರವರೆಗೆ ನಡೆಯುತ್ತಿರುವ ಒಂದು ತಿಂಗಳ ಪರ್ಯಂತ ಪುರಾಣ ಪ್ರವಚನದಲ್ಲಿ ಇಂದು 25 ತುಲಾಭಾರಗಳು ಜರುಗಲಿವೆ.
ಇಂದಿನ ಪ್ರವಚನದ ದಿವ್ಯ ಸಾನ್ನಿಧ್ಯ ವಹಿಸಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರಿಗೆ ಒಟ್ಟು 25 ಜನರು ತಮ್ಮ ತಮ್ಮ ತುಲಾಭಾರ ಸೇವೆಗಳನ್ನು ಸಮರ್ಪಿಸಲಿದ್ದಾರೆ ಎಂದು ಭಜನಾ ಸಂಘದ ಸಂಚಾಲಕರೂ, ಪುರಾಣ ಪ್ರವಚನದ ಸಂಚಾಲಕರೂ ಆಗಿರುವ ಅಜ್ಜಂಪುರ ಶೆಟ್ರು ಮೃತ್ಯುಂಜಯ ತಿಳಿಸಿದ್ದಾರೆ.