ರಾಣೇಬೆನ್ನೂರು,ಜ.15- ಇಲ್ಲಿನ ಶ್ರೀ ಸಿದ್ದೇಶ್ವರ ಬ್ಯಾಂಕ್ ಅಧ್ಯಕ್ಷರಾಗಿ ವರ್ತಕ ಮಲ್ಲೇಶಣ್ಣ ಅರಕೇರಿ, ಉಪಾಧ್ಯಕ್ಷರಾಗಿ ಮಾಜಿ ಶಾಸಕ ದಿವಂಗತ ವಿ.ಎಸ್.ಕರ್ಜಗಿ ಅವರ ಮಗ ರವಿ ಕರ್ಜಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 27 ವರ್ಷಗಳ ಕಾಲ ಅವಿರೋಧವಾಗಿ ಆಯ್ಕೆಯಾಗಿ ಆಡಳಿತ ನಡೆಸುತ್ತಿದ್ದ ಎಂ.ಎಸ್.ಅರಕೇರಿ ಗುಂಪು ಕಳೆದ ವಾರ ಪ್ರಥಮ ಬಾರಿಗೆ ನಡೆದ ಚುನಾವಣೆ ಎದುರಿಸಿ ಜಯ ಗಳಿಸಿ, ಪುನಃ ಬ್ಯಾಂಕ್ ಆಡಳಿತವನ್ನು ವಶಪಡಿಸಿಕೊಂಡಿತ್ತು.
January 16, 2025