ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ಒತ್ತಾಯ

ದಾವಣಗೆರೆ, ಜ. 14- ಜಿಲ್ಲೆಯ ಕೆರೆಗಳ ಅಭಿವೃದ್ಧಿ ಹಾಗೂ ಕೆರೆಗಳನ್ನು ಹೆಚ್ಚು ಮಾಡುವಂತೆ ಆಗ್ರಹಿಸಿ ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನ ಒಕ್ಕೂಟ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ 1500 ರಿಂದ 2000 ಕೆರೆಗಳಿವೆ. ಆದರೆ ದಾವಣಗೆರೆ ಜಿಲ್ಲೆಯಲ್ಲಿ ಕೇವಲ 538 ಕೆರೆಗಳು ಮಾತ್ರ ಇವೆ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿ ನೋಡಿದರೆ ಕಡಿಮೆ ಇದ್ದು, ಹೆಚ್ಚು ಮಾಡುವುದು ಅನಿವಾರ್ಯ ವಾಗಿರುತ್ತದೆ. ತಕ್ಷಣ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಈ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 2013 ರಿಂದ 2023 ರವರೆಗೆ ಸಭೆಗಳನ್ನು ನಡೆಸುತ್ತಾ ಬರಲಾಗಿದೆ. ಸಭೆಗಳ ಅನ್ವಯ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು, ಬೃಹತ್ ನೀರಾವರಿ , ಸಣ್ಣ ನೀರಾವರಿ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಒಕ್ಕೂಟದ ರಾಜ್ಯ ಸಂಚಾಲಕ ಬಲ್ಲೂರು ರವಿಕುಮಾರ್ ತಿಳಿಸಿದ್ದಾರೆ.

ಬಸವಾಪಟ್ಟಣದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೃಹದಾಕಾರದ ಕೆರೆಯಿದ್ದು, ಈ ಕೆರೆ ಹೂಳು ತುಂಬಿರುತ್ತದೆ. ತಕ್ಷಣ ಹೂಳು ತೆಗೆಸಿ, ಕೆರೆ ಏರಿಯನ್ನು ಹದ್ದುಬಸ್ತ್ ಮಾಡದಿದಲ್ಲಿ ನೀರಿನ ಕೊರತೆ ನೀಗಿಸಬಹುದು. ಈಗಾಗಲೇ ಮಾಯ ಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಪರಿಶೀಲನೆ ನಡೆಸಿದ್ದಾರೆಂದು ರವಿಕುಮಾರ್ ತಿಳಿಸಿದ್ದಾರೆ.

error: Content is protected !!