ಜಗಳೂರು, ಜ.14- ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಶ್ರೀ ಗುರು ಶಾಂತಲಿಂಗೇಶ್ವರ ರಥೋತ್ಸವ ಅದ್ಧೂರಿ ಹಾಗೂ ಸಡಗರದಿಂದ ಜರುಗಿತು.
ರಥ ಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ ಸಾವಿರಾರು ಭಕ್ತ ಸಮೂಹ ಭಕ್ತಿಗೆ ಪಾತ್ರರಾದರು.
ಭಕ್ತಾದಿಗಳಿಗೆ ಪ್ರಸಾದ : ರಥೋತ್ಸವಕ್ಕೆ ಆಗಮಿಸಿದ್ದ ಭಕ್ತ ಸಮೂಹಕ್ಕೆ ರೊಟ್ಟಿ, ಪಲ್ಯ, ಪಾಯಸ, ಅನ್ನ ಸಾಂಬಾರ್ ಪ್ರಸಾದ ವಿತರಿಸಲಾಗಿತ್ತು. ವಿವಿಧ ತಾಲೂಕು,ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.
ಪಟ್ಟಾಧ್ಯಕ್ಷರಾದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ದರ್ಶನ, ಆಶೀರ್ವಚನ ನೀಡಿ ಶುಭ ಹಾರೈಸಿದರು.
ಪ್ರತಿ ವರ್ಷ ಮಕರ ಸಂಕ್ರಮಣದ ದಿನದ ವಿಶೇಷ ವಾಗಿ ಭಕ್ತ ಸಮೂಹ ರಥೋತ್ಸವ ಹಾಗೂ ಧಾರ್ಮಿಕ ಕೈಂಕರ್ಯದಲ್ಲಿ ಭಾಗವಹಿಸುತ್ತಿರುವುದು ಸ್ವಾಗತಾರ್ಹ, ನಾನು ಪೀಠಾಧ್ಯಕ್ಷತೆ ವಹಿಸಿದ ನಂತರ ಕಳೆದ 2 ದಶಕಗಳಿಂದ ಭಕ್ತರು ವರ್ಷದಿಂದ ವರ್ಷಕ್ಕೆ ಅಧಿಕ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಯ ಹಾಗೂ ಆಂಧ್ರಪ್ರದೇಶ ದಿಂದಲೂ ಗಣ್ಯರು, ಭಕ್ತ ಸಮೂಹದವರು ಭಾಗವಹಿಸಿದ್ದರು.